Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ತಲೈವಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು

ಚೆನ್ನೈ, : ಪಂದ್ಯದ ಕೊನೆಯ ಹತ್ತು ನಿಮಿಷಗಳ ಆಟದಲ್ಲಿಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ 66ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ವಿರುದ್ಧ 4ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸತತ ಎರಡು ಟೈಬ್ರೇಕರ್‌ ಪಂದ್ಯಗಳಲ್ಲಿನ ವೀರೋಚಿತ ಸೋಲಿನಿಂದ ಹೊರಬಂದಿತು. Bengaluru Bulls earn revenge over Tamil Thalaivas, seal 33-29 win in a thriller.

ಎಸ್‌ಡಿಎಟಿ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ 2ನೇ ಪಂದ್ಯದಲ್ಲಿಬೆಂಗಳೂರು ಬುಲ್ಸ್‌ ತಂಡ 33-29 ಅಂಕಗಳಿಂದ ತಲೈವಾಸ್‌ಗೆ ಆಘಾತ ನೀಡಿತು.  ಇದರೊಂದಿಗೆ ಬುಲ್ಸ್‌ ಒಟ್ಟಾರೆ 12 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿಮೇಲೇರಿತು.

ಬುಲ್ಸ್‌ ತಂಡದ ಪರ ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌(10 ಅಂಕ) ಮಿಂಚಿದರೆ, ಡಿಫೆಂಡರ್‌ಗಳಾದ ದೀಪಕ್‌ ಶಂಕರ್‌ ಮತ್ತು ಸಂಜಯ್‌ ಕ್ರಮವಾಗಿ 4 ಮತ್ತು 5 ಅಂಕ ಗಳಿಸಿದರು. ತಲೈವಾಸ್‌ ಪರ ಅರ್ಜುನ್‌ ದೇಶ್ವಾಲ್‌ ಮತ್ತು ರೋಹಿತ್‌ ಕ್ರಮವಾಗಿ 9 ಮತ್ತು 6 ಅಂಕಗಳನ್ನು ಗಳಿಸಿದರು. 32ನೇ ನಿಮಿಷದಲ್ಲಿಅಭಿರಾಜ್‌ ಪವಾರ್‌ ಅವರನ್ನು ಟ್ಯಾಕಲ್‌ ಮಾಡುವುದರೊಂದಿಗೆ ತಲೈವಾಸ್‌ ತಂಡವನ್ನು ಆಲ್‌ಔಟ್‌ ಮಾಡಿದ ಬುಲ್ಸ್‌, ಸೇಡು ತೀರಿಸಿಕೊಂಡಿತಲ್ಲದೆ, 27-23ರಲ್ಲಿಮೇಲುಗೈ ಸಾಧಿಸಿತು. ಡಿಫೆಂಡರ್‌ ದೀಪಕ್‌ ಶಂಕರ್‌ ಟ್ಯಾಕಲ್‌ನಲ್ಲಿಲಯ ಕಂಡುಕೊಂಡಿದ್ದು, ಬುಲ್ಸ್‌ ಮೇಲುಗೈ ನೆರವಾಯಿತು.

ಮುನ್ನಡೆ ಸಾಧಿಸುವ ಇರಾದೆಯೊಂದಿಗೆ ಇತ್ತಂಡಗಳು ದ್ವಿತೀಯಾರ್ಧ ಆರಂಭಿಸಿದವು. ಆದರೆ ರಕ್ಷ ಣಾತ್ಮಕ ಆಟಕ್ಕೆ ಹೆಚ್ಚು ಆದ್ಯತೆ ನೀಡದ ಕಾರಣ ಅಂಕ ಗಳಿಸಲು ತಿಣುಕಾಡಬೇಕಾಯಿತು. 20ರಿಂದ 30 ನಿಮಿಷಗಳ ಹೋರಾಟದಲ್ಲಿಬುಲ್ಸ್‌ ತಂಡ 6 ಅಂಕ ಗಳಿಸಿದರೆ, ತಲೈವಾಸ್‌ ತಂಡ ಕೇವಲ 3 ಅಂಕಗಳಿಗೆ ಸೀಮಿತಗೊಂಡಿತು.

ಸಮಬಲದ ಹೋರಾಟ: ಟ್ಯಾಕಲ್‌ ಮತ್ತು ರೇಡಿಂಗ್‌ ಎರಡರಲ್ಲೂಸಮಬಲದ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ಮತ್ತು ತಮಿಳ್‌ ತಲೈವಾಸ್‌ ತಂಡಗಳು ಪಂದ್ಯದ ಪೂರ್ವಾರ್ಧದ ಮುಕ್ತಾಯಕ್ಕೆ ಜಿಜ್ದಾದಿಜ್ದಿನ ಹೋರಾಟ ಸಂಘಟಿಸಿದವು. ಆದಾಗ್ಯೂ ತಮಿಳ್‌ ತಲೈವಾಸ್‌ 18-17ರಲ್ಲಿಅಲ್ಪ ಮೇಲುಗೈ ಸಾಧಿಸಿತು. ಬುಲ್ಸ್‌ ತಂಡ ಟ್ಯಾಕಲ್‌ನಲ್ಲಿ4 ಹಾಗೂ ರೇಡಿಂಗ್‌ನಲ್ಲಿ12 ಅಂಕಗಳು ಸೇರಿದಂತೆ ಒಟ್ಟಾರೆ 17 ಅಂಕ ಕಲೆಹಾಕಿದರೆ, ತಲೈವಾಸ್‌ ಕೂಡ 5 ಟ್ಯಾಕಲ್‌ ಪಾಯಿಂಟ್ಸ್‌ ಅಲ್ಲದೆ, 11 ರೇಡಿಂಗ್‌ ಪಾಯಿಂಟ್ಸ್‌ ಗಿಟ್ಟಿಸಿತು. ಜತೆಗೆ 2 ಆಲೌಟ್‌ ಪಾಯಿಂಟ್ಸ್‌ಗಳನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ  ತನ್ನ ಹಿಂದಿನ ಎರಡು ಪಂದ್ಯಗಳಲ್ಲಿಟೈಬ್ರೇಕರ್‌ನಲ್ಲಿವೀರೋಚಿತ ಸೋಲನುಭವಿಸಿದ್ದ ಬೆಂಗಳೂರು ಬುಲ್ಸ್‌ ಪುಟಿದೇಳುವ ಗುರಿಯೊಂದಿಗೆ ಕಣಕ್ಕಿಳಿಯಿತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಬಹುತೇಕ ಸಮ ಹೋರಾಟ ನೀಡಿದವು. 6-6, 8-8ರಲ್ಲಿಪೈಪೋಟಿ ಒಡ್ಡಿದವು. ಬುಲ್ಸ್‌ ಪರ ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಮಿಂಚಿದರೆ, ತಲೈವಾಸ್‌ ತಂಡದ ಪರ ರೋಹಿತ್‌ ಬೇನಿವಾಲ್‌ ಮತ್ತು ಅರ್ಜುನ್‌ ದೇಶ್ವಾಲ್‌ ಕಂಗೊಳಿಸಿದರು.

ಬೆಂಗಳೂರು ಬುಲ್ಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿಅಕ್ಟೋಬರ್‌ 11ರಂದು ನವದೆಹಲಿಯಲ್ಲಿಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಸವಾಲು ಎದುರಿಸಲಿದೆ.


administrator