Wednesday, November 13, 2024

ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ 

ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ ) ಇವರ ವತಿಯಿಂದ ಏಪ್ರಿಲ್ 21ರ ಭಾನುವಾರದಂದು ಲೈಟ್ ಹೌಸ್ ಹಳೆಯಂಗಡಿ ಇಲ್ಲಿ ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ.

ಪುರುಷರ ಮುಕ್ತ ಸಿಂಗಲ್ಸ್ಹಾಗೂ ಡಬಲ್ಸ್, ಮಹಿಳಾ ಮುಕ್ತ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತರು ಹಾಗೂ ರನ್ನರ್ ಅಪ್ ಪ್ರಶಸ್ತಿ ಗೆದ್ದವರಿಗೆ  ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪ್ರವೇಶ ಶುಲ್ಕ ಸಿಂಗಲ್ಸ್ ರೂ. 300ಹಾಗೂ ಡಬಲ್ಸ್ ರೂ. 500 ಆಗಿರುತ್ತದೆ ಎಂದು ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ  ಗಣೇಶ್ ಕಾಮತ್ 8884409014 ಹಾಗೂ ಸಂತೋಷ್ 9843077325 ಅವರನ್ನು ಸಂಪರ್ಕಿಸಬಹುದು. ನಾಕೌಟ್ ಮಾದರಿಯಲ್ಲಿ 30 ಅಂಕಗಳ 1 ಸೆಟ್ ಗೇಮ್ ಆಗಿರುತ್ತದೆ.

Related Articles