Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Pro Kabaddi: ಟೈಬ್ರೇಕರ್‌ನಲ್ಲಿ ಪೈರೇಟ್ಸ್‌ಗೆ ಮಣಿದ ಬುಲ್ಸ್‌

ನವದೆಹಲಿ:  ಟೈಬ್ರೇಕರ್‌ನಲ್ಲಿಸ್ಥಿರತೆ ಕಾಯ್ದುಕೊಳ್ಳಲು ವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ 88ನೇ ಪಂದ್ಯದಲ್ಲಿಪಟನಾ ಪೈರೇಟ್ಸ್‌ ವಿರುದ್ಧ ವೀರೋಚಿತ ಸೋಲನುಭವಿಸಿತು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿನಾಲ್ಕನೇ ಬಾರಿ ಟೈಬ್ರೇಕರ್‌ನಲ್ಲಿಬುಲ್ಸ್‌ ಪರಾಭವಗೊಂಡಿತು. ಅಲ್ಲದೆ, ಹ್ಯಾಟ್ರಿಕ್‌ ಗೆಲುವಿನ ಬಳಿಕ ಸೋಲಿಗೆ ಒಳಗಾಯಿತು. Ayan’s Super 10 and Mandeep’s clutch raid helps Patna Pirates clinch tie-breaker against Bengaluru Bulls

ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿಬೆಂಗಳೂರು ಬುಲ್ಸ್‌ 6-5 ಅಂಕಗಳಿಂದ ಪಟನಾ ಪೈರೇಟ್ಸ್‌ಗೆ ಮಂಡಿಯೂರಿತು. ಇದಕ್ಕೂ ಮುನ್ನ ಅಲಿರೇಜಾ ಮಿರ್ಜಾಯಿನ್‌ ಅವರ ಹೋರಾಟದಿಂದಾಗಿ 32 -32 ಅಂಕಗಳಿಂದ ಪೈರೇಟ್ಸ್‌ ವಿರುದ್ಧ ಸಮಬಲ ಸಾಧಿಸಿತು.

ಬೆಂಗಳೂರು ಬುಲ್ಸ್‌ ಪರ ಅಲಿರೇಜಾ ಮಿರ್ಜಾಯಿನ್‌ (17 ಅಂಕ) ಏಕಾಂಗಿ ಹೋರಾಟ ನಡೆಸಿದರೆ, ಪ್ಲೇಆಫ್‌ ಹಂತದಿಂದ ಹೊರಬಿದ್ದಿರುವ ಪಟನಾ ಪೈರೇಟ್ಸ್‌ ತಂಡದ ಪರ ನಾಯಕ ಆಯಾನ್‌ (14 ಅಂಕ) ಗಳಿಸಿದರು. ಇವರಲ್ಲದೆ, ಅಂಕಿತ್‌ ಕುಮಾರ್‌ 5 ಅಂಕಗಳ ಅಲ್ಪ ಕೊಡುಗೆ ನೀಡಿದರು. ಎರಡನೇ ಅವಧಿಯಲ್ಲಿಆಲ್‌ರೌಂಡ್‌ ಪ್ರದರ್ಶನ ನೀಡಿದ ಬುಲ್ಸ್‌, 2 ಆಲೌಟ್‌ ಅಂಕ, 2 ಇತರೆ ಅಂಕ, 3 ಟ್ಯಾಕಲ್‌ ಅಂಕಗಳ ಜತೆಗೆ 12 ರೇಡಿಂಗ್‌ ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತು. ಅಂತೆಯೇ ಪೈರೇಟ್ಸ್‌ ಸಹ ತಲಾ ಎರಡು ಇತರೆ, ಆಲೌಟ್‌ ಮತ್ತು ಟ್ಯಾಕಲ್‌ ಜತೆಗೆ 10 ರೇಡಿಂಗ್‌ ಅಂಕಗಳನ್ನು ಗಿಟ್ಟಿಸಿತು.

ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತೀಯಾರ್ಧದ ಕೊನೆಯ ಹತ್ತು ನಿಮಿಷಗಳಲ್ಲಿಅತ್ಯಮೋಘ ಆಟ ಪ್ರದರ್ಶಿದ ಬೆಂಗಳೂರು ಬುಲ್ಸ್‌ ಭಾರಿ ಹಿನ್ನಡೆಯಿಂದ ಹೊರಬಂದಿತು. ಅದರಲ್ಲೂಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳು ಬಾಕಿ ಇರುವಾಗ ಬುಲ್ಸ್‌ ತಂಡ 9 ಅಂಕಗಳನ್ನು ಕಲೆಹಾಕಿದರೆ, ಪೈರೇಟ್ಸ್‌ ಕೇವಲ 1 ಅಂಕ ಗಳಿಸಲಷ್ಟೇ ಶಕ್ತಗೊಂಡಿತು. 38ನೇ ನಿಮಿಷದಲ್ಲಿಅಂಕಿತ್‌ ಅವರನ್ನು ಔಟ್‌ ಮಾಡಿದ ಮಿರ್ಜಾಯಿನ್‌ ತಂಡಕ್ಕೆ ಆಲೌಟ್‌ ಪಾಯಿಂಟ್ಸ್‌ ತಂದುಕೊಟ್ಟರು. ಇದಕ್ಕೂ ಮುನ್ನ 14ನೇ ನಿಮಿಷದಲ್ಲಿಬುಲ್ಸ್‌ ತಂಡವನ್ನು ಆಲೌಟ್‌ ಮಾಡಿದ ಪೈರೇಟ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಪಟನಾ ಪೈರೇಟ್ಸ್‌ ವಿರುದ್ಧ 13-16ರಲ್ಲಿ ಹಿನ್ನಡೆ ಅನುಭವಿಸಿತು.

ಉಭಯ ತಂಡಗಳು ಹೆಚ್ಚು ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದ ಕಾರಣ ರೇಡರ್‌ಗಳು ಅಂಕ ಗಳಿಸಲು ತಿಣುಕಾಡಿದರು. ವಿರಾಮದ ಮೊದಲು ಬುಲ್ಸ್‌ ತಂಡ 3 ಟ್ಯಾಕಲ್‌ ಹಾಗೂ 9 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದರೆ, ಪೈರೇಟ್ಸ್‌ ತಂಡ 11 ರೇಡಿಂಗ್‌ ಮತ್ತು 4 ಟ್ಯಾಕಲ್‌ ಅಂಕಗಳನ್ನು ಗಳಿಸಿ ಮೇಲುಗೈ ಸಾಧಿಸಿತು.

ಬೆಂಗಳೂರು ಬುಲ್ಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿಅ.18ರಂದು ದಬಾಂಗ್‌ ದಿಲ್ಲಿತಂಡವನ್ನು ಎದುರಿಸಲಿದೆ.


administrator