Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಯುದ್ಧ: ಎರಡು ವರ್ಷಗಳಲ್ಲಿ 1007 ಕ್ರೀಡಾಪಟುಗಳ ಸಾವು!

 

ಗಾಝಾ ಸಿಟಿ: ಇಸ್ರೇಲ್‌ ದೇಶ ಪ್ಯಾಲಿಸ್ತೀನಿಯಾದ ಮೇಲೆ ನಡೆಸಿದ ಯುದ್ದದಲ್ಲಿ 2023 ಅಕ್ಟೋಬರ್‌ನಿಂದ ಇದುವರೆಗೂ 1007ಕ್ಕೂ ಹೆಚ್ಚು ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ ಹಾಗೂ 265ಕ್ಕೂ ಹೆಚ್ಚು ಕ್ರೀಡಾ ಸೌಲಭ್ಯಗಳು ನಾಶ ಹೊಂದಿವೆ ಎಂದು ಪ್ಯಾಲೆಸ್ತೀನಿಯಾದ ಒಲಿಂಪಿಕ್ಸ್‌ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಳಿಸಿದೆ. At least 1,007 Palestinians sports people were killed and 265 facilities destroyed during Israel’s genocidal war on the Gaza Strip since October 2023.

ಸಾವಿಗೀಡಾದ ಕ್ರೀಡಾಪಟುಗಳಲ್ಲಿ 45 ಮಹಿಳಾ ಕ್ರೀಡಾಪಟುಗಳು ಸೇರಿದ್ದಾರೆ ಎಂದು ಒಲಿಂಪಿಕ್ಸ್‌ ಸಮಿತಿಯ ಉಪಾಧ್ಯಕ್ಷ ಅಸಾದ್‌ ಅಲ್‌ ಮಜ್ದಾಲವಿ ಹೇಳಿದ್ದಾರೆ.

ಇಸ್ರೇಲ್‌ ದೇಶವು ಗಾಝಾದ ಮೇಲೆ ಎರಡು ವರ್ಷಗಳ ಕಾಲ ನಡೆಸಿದ ದಾಳಿಯಲ್ಲಿ 72,000 ಜನರು ಸಾವಿಗೀಡಾಗಿದ್ದು, 1,71,000 ಜನರು ಗಾಯಗೊಂಡಿದ್ದಾರೆ.


administrator