Thursday, April 25, 2024

ಏಷ್ಯನ್ ಬಾಡಿಬಿಲ್ಡಿಂಗ್‌ಗೆ ಭಾರತ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ 

ಅಕ್ಟೋಬರ್ 2 ರಿಂದ 8 ವರೆಗೆ ಪುಣೆಯಲ್ಲಿ ನಡೆಯಲಿರುವ 52ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಹಾಗೂ ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನಲ್ಲಿ  ಮಿ. ಇಂಡಿಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್  ವಿಜೇತ ಮಹಾರಾಷ್ಟ್ರದ ಸುನಿತ್ ಜಾಧವ್ ಹಾಗೂ ಉತ್ತರ ಪ್ರದೇಶದ ಯತೀಂದರ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಏಷ್ಯನ್ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್  ಸ್ಪೋರ್ಟ್ಸ್ ಫೆಡರೇಷನ್ ಆಶ್ರಯದಲ್ಲಿ ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.  ಏಳು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಒಟ್ಟು 51 ವಿಭಾಗಗಳಲ್ಲಿ ಸ್ಪರ್ಧೆ  ನಡೆಯಲಿದೆ.
ಭಾರತದಲ್ಲಿ ಈಗ ಬಾಡಿಬಿಲ್ಡಿಂಗ್ ಕ್ರೀಡೆ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಏಷ್ಯನ್ ಚಾಂಪಿಯನ್‌ಷಿಪ್ ಆತಿಥ್ಯ ವಹಿಸುವ ಮೂಲಕ ಈ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಇದರಿಂದಾಗಿ ಈ ಕ್ರೀಡೆ ಮತ್ತಷ್ಟು ಜನಪ್ರಿಯಗೊಳ್ಳಲಿದೆ ಎಂದು ನಂಬಿಕೆ ನಮಗಿದೆ ಎಂದು ಐಬಿಬಿಎಫ್ ನ   ಪ್ರಧಾನ ಕಾರ್ಯದರ್ಶಿ ಚೇತನ್ ಪಾಥ್ರೆ ಹೇಲಿದ್ದಾರೆ.
ರಾಯ್ಪುರದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಾರಾಷ್ಟ್ರದ ಸಾಗರ್ ಕಾತ್ರುಡೆ, ರೈಲ್ವೇಸ್‌ನ ಭಾಸ್ಕರನ್, ರೈಲ್ವೇಸ್‌ನ ಜಯಪ್ರಕಾಶ್, ಫಿಸಿಕ್ ಸ್ಪೋರ್ಟ್ಸ್‌ನಲ್ಲಿ ಮಣಿಪುರದ ಸರಿತಾ ದೇವಿ, ದಿಲ್ಲಿಯ ಮಮತಾ ದೇವಿ, ಉತ್ತರ ಪ್ರದೇಶದ ಸಂಜನಾ ಡಾಲಕ್, ಕರ್ನಾಟಕದ ಅಂಕಿತಾ ಸಿಂಗ್, ಮಹಾರಾಷ್ಟ್ರದ ನೀಲೇಶ್ ಬಾಂಬ್ಲೆ, ಚಂಡೀಗಢದ ಚೇತನ್, 52 ವರ್ಷ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಹಾರಾಷ್ಟ್ರದ ನಿಶ್ರೀಮ್ ಪಾರಿಕ್ ದೇಶವನ್ನು ಪ್ರತಿನಿಧಿಸಲಿದ್ದಾರೆ.

Related Articles