Friday, October 4, 2024

ಅಮಿತಾಬ್‌ ಬಚ್ಚನ್‌ಗೆ ಫೈನಲ್‌ ಪಂದ್ಯ ನೋಡದಿರಲು ಸಲಹೆ!

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಜಯ ಗಳಿಸಿದ ಭಾರತ ವಿಶ್ವಕಪ್‌ ಫೈನಲ್‌ ಪಂದ್ಯ ಪ್ರವೇಶಿಸಿದೆ. ನವೆಂಬರ್‌ 19ರಂದು ಅಹಮದಾಬಾದ್‌ನಲ್ಲಿ ಭಾರತ ಫೈನಲ್‌ ಪಂದ್ಯವನ್ನಾಡಲಿದೆ. ಈ ನಡುವೆ ಬಾಲಿವುಡ್‌ನ ಮೇರು ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಫೈನಲ್‌ ಪಂದ್ಯ ವೀಕ್ಷಿಸದಂತೆ ಸಲಹೆ ನೀಡಲಾಗಿದೆ. Amitabh Bachchan get warning not to watch world cup final

ಅಮಿತಾಬ್‌ ಬಚ್ಚನ್‌ ಭಾರತದ ಪಂದ್ಯಗಳನ್ನು ವೀಕ್ಷಿಸದಿದ್ದಾಗ ಟೀಮ್‌ ಇಂಡಿಯಾ ಜಯ ಸಾಧಿಸುತ್ತದೆ. ಈ ವಿಷಯವನ್ನು ಬಚ್ಚನ್‌ ತಮ್ಮ X (ಟ್ವಿಟರ್‌)ನಲ್ಲಿ ಹೇಳಿಕೊಂಡಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಚ್ಚನ್‌ ಅವರಿಗೆ ಫೈನಲ್‌ ಪಂದ್ಯ ನೋಡದಿರುವಂತೆ ಸಲಹೆ ನೀಡಿದ್ದಾರೆ.

ಬಚ್ಚನ್‌  ಅವರು X ನಲ್ಲಿ ವಿಷಯವನ್ನು ಬಹಿರಂಗ ಪಡಿಸುತ್ತಿದ್ದಂತೆ ಹಲವಾರು ಸಲಹೆ ಸೂಚನೆಗಳು ಬಂದಿವೆ. “ದಯವಿಟ್ಟು ಮನೆಯಲ್ಲೇ ಇರಿ,” “ಪಂದ್ಯಗಳನ್ನು ವೀಕ್ಷಿಸಬೇಡಿ, ಸರ್‌,” “ಅವರಲ್ಲಿರುವ ಗೋಲ್ಡನ್‌ ಪಾಸನ್ನು ಈ ಕೂಡಲೇ ಹಿಂಪಡೆಯಿರಿ,”

ಬುಧವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿದರು. ಸಚಿನ್‌ ಸಮ್ಮುಖದಲ್ಲಿಯೇ, ವಾಂಖೆಡೆ ಕ್ರೀಡಾಂಗಣದಲ್ಲಿಯೇ ದಾಖಲೆಯನ್ನು ಮುರಿದಿರುವುದು ವಿಶೇಷ. ಆದರೆ ಪಂದ್ಯದ ಹೀರೋ 7 ವಿಕೆಟ್‌ಗಳನ್ನು ಗಳಿಸಿದ ಮೊಹಮ್ಮದ್‌ ಶಮಿ.

Related Articles