ಬೆಂಗಳೂರು: ಹರಿಯಾಣದ ಭಿವಾನಿಯಲ್ಲಿ ಮಾರ್ಚ್ 22 ರಿಂದ 27ರವರೆಗೆ ನಡೆಯಲಿರುವ 27ನೇ ರಾಷ್ಟ್ರೀಯ ಸಬ್ ಜೂನಿಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಷಿಯೇಷನ್ ಆಯ್ಕೆ ಮಾಡಿದೆ.
ಬಾಲಕರ ತಂಡ: ರೋಹಿತ್ ವಿ.ಎನ್. (ನಾಯಕ), ಮೋಹನ್ ರಾವ್ ಟಿ.ಜೆ, (ಉಪನಾಯಕ), ಆರ್ಯ ನಾರಾಯಣ ಜಿ.ಎಲ್, ಸಂತೋಷ್ ಕುಮಾರ್ ಬಿ, ನಿಹಾಲ್ ಜಿ,, ಮೊಹಮ್ಮದ್ ಜಯಾನ್, ನಿತಿನ್ ನಯಾನ್ ಆರ್, ಧರ್ಷನ್ ರೆಡ್ಡಿ, ಮಹದೇವ ಎಂ, ಚಿರಂತ್ ಕೆ. ಕಟ್ಟೀಮನಿ, ಚಿರಂತನ್, ಆರ್ಯನ್ ಎ. ಶೇಠ್,
ಕೋಚ್: ಮಹೇಶ್ ಬಿ.ಎನ್.
ಬಾಲಕಿಯರ ತಂಡ: ಶ್ರೇಯಾ ಎಂ (ನಾಯಕಿ), ಮೋಹನ್ ರಶಿಕ ಎಸ್ (ಉಪನಾಯಕಿ), ಶಮಿತ ಎಸ್. ಶೆಟ್ಟಿ, ಪೂಜಾ ಬಿ, ವಿಹಾ ಮಂಜುನಾಥ್, ಮೊನಾಲ್ ಆರ್, ಇಂದೂ ಜಿ, ತನುಷಾ ಗೌಡ ಎಂ,ಎಸ್,, ಸನಿಕಾ ಎ,, ಇಂದೂಶ್ರೀ ಕೆ. ಗೌಡ, ಸೌಮ್ಯ ಸಿ, ಇಂಚರ.
ಕೋಚ್: ರಾಮಕೃಷ್ಣಯ್ಯ ಎನ್.
ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯಾದ ಗಿರೀಶ್ ಸಿ. ಅವರು ತಂಡವನ್ನು ಪ್ರಕಟಿಸಿದ್ದಾರೆ. ಮಾರ್ಚ್ 10 ರಿಂದ 21ರವರೆಗೆ ತಂಡಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಕೋವಿಡ್ ನಿಯಮಾನುಸಾರ ಮೊದಲ ಸುತ್ತಿನ ಪಂದ್ಯವು ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಬೆಂಗಳೂರಿನ ರಾಜಾಜಿನಗರಲ್ಲಿರುವ ಬಸವೇಶ್ವರ ಕಾಲೇಜಿನಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ 31-15 ಅಂತರದಲ್ಲಿ ತಮಿಳುನಾಡು ವಿರುದ್ಧ ಜಯ ಗಳಿಸಿತ್ತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು 34-05 ಅಂತರದಲ್ಲಿ ತಮಿಳುನಾಡಿಗೆ ಸೋಲುಣಿಸಿತು.