Saturday, February 24, 2024

ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಆಯ್ಕೆ ಟ್ರಯಲ್ಸ್‌

sportsmail

ಮಹಾರಾಷ್ಟ್ರದಲ್ಲಿ ನಡೆಯಲಿರುವ 68ನೇ ರಾಷ್ಟ್ರೀಯ ಸೀನಿಯನ್‌ ಮಹಿಳಾ ಕಬಡ್ಡಿ ಚಾಂಪಿಯನ್ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆಯು 29-12-2021 ರಂದು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪಾಲ್ಗೊಳ್ಳುವವರು ಗಮನಿಸಿ:

  1. ಮಹಿಳಾ ಕಬಡ್ಡಿ ಆಟಗಾರರ ದೇಹದ ತೂಕ 75ಕೆಜಿಗೆ ಮೀರಿರಬಾರದು.
  2. ಮೂಲ ಆಧಾರ್‌ ಕಾರ್ಡ್‌, ನಾಲ್ಕು ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರಗಳು ಹಾಗೂ ಮ್ಯಾಟ್‌ ಶೂ ತರತಕ್ಕದ್ದು.
  3. ಮಹಿಳಾ ಕಬಡ್ಡಿ ಆಟಗಾರರ ಆಯ್ಕೆಯನ್ನು ದಿನಾಂಕ 29-12-2021 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಿಸಲಾಗುವುದು.
  4. ಆಯ್ಕೆಯನ್ನು ಸರಕಾರಿ ಪ್ರಾಥಮಿಕ ಶಾಲೆ, ಸುಬೇದಾರ್‌ ಪಾಳ್ಯ, ಯಶವಂತಪುರ, ಬೆಂಗಳೂರು -22 ಇಲ್ಲಿ ನಡೆಸಲಾಗುವುದು. ಸರ್ಕಾರದಿಂದ ಅಂಗೀಕೃತಗೊಂಡ ತರಬೇತುದಾರರ ಸಮ್ಮುಖದಲ್ಲಿ ಆಯ್ಕೆಪ್ರಕ್ರಿಯೆ ನಡೆಯಲಿದೆ.
  5. ಈ ಅಯ್ಕೆಯನ್ನು ಅರ್ಜುನ ಪ್ರಶಸ್ತಿ ವಿಜೇತ, ಡಾ, ಹೊನ್ನಪ್ಪ ಗೌಡ, ಸಿ, ಆಲ್‌ ಇಂಡಿಯಾ ಕೌನ್ಸಿಲ್‌ ಆಫ್‌ ಸ್ಪೋರ್ಟ್ಸ್‌, ಭಾರತ ಸರಕಾರ ಇವರ ನೇತ್ರತ್ವದಲ್ಲಿ ನಡೆಸಲಾಗುವುದು, ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ವಿವರಗಳಿಗಾಗಿ 9945633003 ದೂರವಾಣಿಯನ್ನು ಸಂಪರ್ಕಿಸಬಹುದು.

16-1-2022 ರಿಂದ 18-1-2022ರ ವರೆಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಮಹಿಳಾ ಸೀನಿಯರ್‌ ಕಬಡ್ಡಿ ಚಾಂಪಿಯನ್ಷಿಪ್‌ ನಡೆಯಲಿದೆ. 12-1-2022ರ ಒಳಗಾಗಿ ತಂಡದ ಪಟ್ಟಿಯನ್ನು ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾಗೆ ಕಳುಹಿಸಬೇಕಾಗಿದೆ. ತಂಡವನ್ನು ಕಳುಹಿಸಿಕೊಡುವಂತೆ ಭಾರತೀಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿಗಳು 30-11-2021ರಂದು ಬರೆದ ಪತ್ರದ ಮುಖೇನ ತಿಳಿಸಿರುತ್ತಾರೆ.

ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಚುನಾವಣೆ ದಿನಾಂಕ 7-12-2021 ರಂದು ನಡೆದಿರುತ್ತದೆ. ಆದರೆ ಉಚ್ಛನ್ಯಾಯಾಲಯವು ಚುನಾವಣಾ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿರುತ್ತದೆ. ಇದರಿಂದಾಗಿ ಸಂಸ್ಥೆಯಿಂದ ನೇರವಾಗಿ ತಂಡವನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ.

ಇದನ್ನು ಮನಗಂಡ ಭಾರತ ಸರಕಾರದ ಆಲ್‌ ಇಂಡಿಯಾ ಸ್ಪೋರ್ಟ್ಸ್‌ ಕೌನ್ಸಿಲ್‌ನ ಸದಸ್ಯ, ಅರ್ಜುನ ಪ್ರಶಸ್ತಿ ವಿಜೇತ, ಹೊನ್ನಪ್ಪ ಗೌಡ ಸಿ ಇವರು ಕರ್ನಾಟಕದ ಕಬಡ್ಡಿ ಆಟಗಾರರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಆಡಳಿತಾಧಿಕಾರಿಗೆ ಆಟಗಾರರನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುವಂತೆ ಪತ್ರದ ಮುಖೇನ ವಿನಂತಿಸಿರುತ್ತಾರೆ. ಇದಕ್ಕೆ ಸ್ಪಂದಿಸಿದ ಆಡಳಿತಾಧಿಕಾರಿ ಎಚ್‌.ಸಿ. ಮಂಜುನಾಥ್‌ ಸ ಅರ್ಹ ಆಟಗಾರರನ್ನು ಆಯ್ಕೆಮಾಡಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ಪತ್ರಮುಖೇನ ತಿಳಿಸಿದ್ದಾರೆ.

ಚಿತ್ರಗಳು ಸಾಂದರ್ಭಿಕ

Related Articles