ಕ್ರಾಸ್ ಕಂಟ್ರಿ: ಆಳ್ವಾಸ್ ಸತತ 21ನೇ ವರ್ಷ ಚಾಂಪಿಯನ್ಸ್
ಮೂಡುಬಿದಿರೆ: ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ಕಂಟ್ರಿ ಚಾಂಪಿಯನ್ಶಿಫ್ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. Alva’s College at Mangalore University Inter College Cross Country won the overall title for the 21st consecutive year.
ಪುರುಷರ ವಿಭಾಗದಲ್ಲಿ ಮೊದಲ 5 ಸ್ಥಾನಗಳನ್ನು ಆಳ್ವಾಸ್ ಕಾಲೇಜಿನ ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೋಹಿತ್ (ಪ್ರಥಮ), ಆದೇಶ್ ಕುಮಾರ್ (ದ್ವಿತೀಯ), ಶುಭಂ(ತೃತೀಯ), ರೋಹಿತ್(4ನೇ ಸ್ಥಾನ), ಹರೇಂದ್ರ(5ನೇ ಸ್ಥಾನ) ಪಡೆದು ಸತತ 21ನೇ ವರ್ಷ ಕುರುಂಜಿ ವಿಶ್ವನಾಥ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಮೊದಲ 6 ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡರು. ಆಳ್ವಾಸ್ನ ತಮಿಶಿ (ಪ್ರಥಮ), ನಿರ್ಮಲಾ(ದ್ವಿತೀಯ), ಭಾಗೀರಥಿ(ತೃತೀಯ), ಯಶಿ(4ನೇ ಸ್ಥಾನ), ಜ್ಯೋತಿ (5ನೇ ಸ್ಥಾನ), ಮನೀಷಾ(6ನೇ ಸ್ಥಾನ) ಪಡೆದು ಸತತ 21ನೇ ವರ್ಷ ಕೈಕುರೆ ಶ್ರೀ ರಾಮಣ್ಣ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ.