Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಥ್ಲೆಟಿಕ್ಸ್‌: ಅಗ್ರ ಸ್ಥಾನ ಕಾಯ್ದುಕೊಂಡ ಮಂಗಳೂರು ವಿವಿ

ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4*400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪಾರಮ್ಯ ಮೆರೆಯಿತು.  ಸಮಗ್ರ ಪದಕ ಪಟ್ಟಿಯಲ್ಲಿ ಮಂಗಳೂರು ವಿ.ವಿ. 74 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. All India Inter University Athletic Championship Mangalore leader in Medal Tally.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಈ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿಗಳು ಬುಧವಾರ ಮೂರು ಚಿನ್ನ ಹಾಗೂ ಮೂರು ಕಂಚಿನ ಪದಕ ಗೆದ್ದಿದ್ದು, ಈವರೆಗೆ ಒಟ್ಟು 12 ಪದಕ ಜಯಿಸಿದರು.  
ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭಾಗೀರಥಿ ಬುಧವಾರ ಮುಂಜಾನೆ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದು, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಭ್ರಮ ತಂದರು.
ಚಿನ್ನ ತಂದ ಭಾಗೀರಥಿ: ಹಾಫ್ ಮ್ಯಾರಥಾನ್‌ನಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾಲಯಕ್ಕೆ ಚಿನ್ನ ತಂದುಕೊಟ್ಟ ಭಾಗೀರಥಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ.  
ಮೂಲತಃ ಉತ್ತರಾಖಂಡ ಚಮೋಲಿ ಜಿಲ್ಲೆಯ ವ್ಯಾನ್ ಹಳ್ಳಿಯ ಭಾಗೀರಥಿ, 2025ರ ಏಪ್ರಿಲ್‌ನಲ್ಲಿ  ಇರಾಕ್‌ನಲ್ಲಿ ನಡೆದಿದ್ದ ಆಲ್ ಬಾಸ್ರಾ ಅಂತರರಾಷ್ಟಿçÃಯ ಹಾಫ್ ಮ್ಯಾರಥಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದೆಹಲಿ, ಮುಂಬೈ, ದೆಹಲಿ ಮಾತ್ರವಲ್ಲ ವಿದೇಶದಲ್ಲಿ ನಡೆಯುವ ಮ್ಯಾರಥಾನ್‌ಗಳಲ್ಲೂ ಪಾಲ್ಗೊಂಡಿದ್ದರು. ಕಳೆದ 35 ವರ್ಷಗಳಿಂದ ಮ್ಯಾರಾಥಾನ್‌ನಲ್ಲಿ ಹೆಸರು ಮಾಡುತ್ತಿರುವ ಸುನೀಲ್ ಶರ್ಮಾ ಆಕೆಯ ತರಬೇತುದಾರ.
ಡಿಸ್ಕಸ್ ಥ್ರೋದಲ್ಲಿ ಚಿನ್ನ ಗೆದ್ದ ಉಜ್ವಲ್ ಚೌಧರಿ ಹರಿಯಾಣದ ಹಿಸ್ಸಾರ್‌ನ ಕೃಷಿಕ ರಾಜೀವ್ ಮತ್ತು ಬಬ್ಲಿ ಅವರ ಪುತ್ರ. ಅರವಿಂದ್ ತರಬೇತಿಯಲ್ಲಿ ಪಳಗಿದ ಉಜ್ವಲ್ ಏಷಿಯನ್ ಚಾಂಪಿಯನ್‌ಶಿಪ್ ಗುರಿ ಹೊಂದಿದ್ದಾರೆ.
ಇದೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಾಗೇಂದ್ರ ಅವರು ಭಟ್ಕಳದ ಆಟೋ ಚಾಲಕ ಅಣ್ಣಪ್ಪ ನಾಯ್ಕ ಅವರ ಪುತ್ರ. ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿದ್ದರು. ಭಾರತವನ್ನು ಪ್ರತಿನಿಧಿಸುವುದು ಅವರ ಕನಸು. ‘ನನ್ನ ಏಕಲವ್ಯ ಪ್ರಯತ್ನವನ್ನು ಪೋಷಿಸಿ -ಬೆಳೆಸುತ್ತಿರುವವರು ಡಾ.ಎಂ. ಮೋಹನ ಆಳ್ವ’ ಎಂದು ಧನ್ಯತೆ ವ್ಯಕ್ತಪಡಿಸಿದರು.


administrator