Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಂಬಾಗ್ ವಿರುದ್ಧ ಬೆಂಗಳೂರು ಬುಲ್ಸ್ ಜಯದ ಸವಾರಿ

ನವದೆಹಲಿ:  ಅಲಿರೇಜಾ ಮಿರ್ಜಾಯೀನ್ ಅವರ ಮತ್ತೊಂದು ಆಲ್ ರೌಂಡ್ ಆಟದ ಫಲವಾಗಿ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬ್ಡಡಿ ಲೀಗ್ 12ನೇ ಆವೃತ್ತಿಯ 94ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡದ ವಿರುದ್ಧ 10 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. Alireza’s Super 10 confirms Bengaluru Bulls top eight spot after dismantling Dabang Delhi

ಈ ಜಯದೊಂದಿಗೆ  ಬೆಂಗಳೂರು ತಂಡವು ಹಿಂದಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಪಟನಾ ಪೈರೇಟ್ಸ್ ವಿರುದ್ಧ ಟೈಬ್ರೇಕರ್ ಸೋಲಿನ ಆಘಾತದಿಂದ ಹೊರಬಂದಿತು.

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 33-23 ಅಂಕಗಳಿಂದ ದಬಾಂಗ್ ದಿಲ್ಲಿ ತಂಡವನ್ನು ಹಣಿಯಿತು. ಇದರೊಂದಿಗೆ 8ನೇ ಜಯ ಗಳಿಸಿದ ಬುಲ್ಸ್ ಒಟ್ಟು 16 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರ ಐದರಲ್ಲಿ ಸ್ಥಾನ ಉಳಿಸಿಕೊಂಡಿದೆ.

ಬುಲ್ಸ್ ತಂಡದ ಪರ ಆಲ್ ರೌಂಡರ್ ಅಲಿರೇಜಾ 13 ಅಂಕಗಳನ್ನು ಗಳಿಸಿದರೆ, ಯೋಗೇಶ್, ದೀಪಕ್ ಮತ್ತು ಸಂಜಯ್ ಕ್ರಮವಾಗಿ 3 ಮತ್ತು 4 ಅಂಕ ಗಳಿಸಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಅತ್ತ ದಬಾಂಗ್ ತಂಡದ ಪರ ಮೋಹಿತ್ 11 ಅಂಕ ಗಳಿಸಿ ತಂಡದ ವೀರೋಚಿತ ಹೋರಾಟಕ್ಕೆ ಸಾಕ್ಷಿಯಾದರು.

ದ್ವಿತೀಯಾರ್ಧದಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ, ನಾಲ್ಕು ಆಲೌಟ್ ಅಂಕಗಳ ಜತೆಗೆ 6 ಟ್ಯಾಕಲ್ ಹಾಗೂ 11 ರೇಡಿಂಗ್ ಸೇರಿ 21 ಅಂಕಗಳನ್ನು ಕಲೆಹಾಕಿತು. ಅತ್ತ ದಬಾಂಗ್ ತಂಡ 2 ಆಲೌಟ್ ಜತೆಗೆ 2 ಟ್ಯಾಕಲ್ ಮತ್ತು 9 ರೇಡಿಂಗ್ ಸೇರಿ 13 ಅಂಕಗಲನ್ನು ಗಳಿಸಲಷ್ಟೇ ಶಕ್ತಗೊಂಡಿತು.

ದ್ವಿತೀಯಾರ್ಧ ಆಟವು ಬೆಂಗಳೂರು ಬುಲ್ಸ್ ತಂಡದ ಪ್ರಭುತ್ವಕ್ಕೆ ಸಾಕ್ಷಿಯಾಯಿತು. 29ನೇ ನಿಮಿಷದಲ್ಲಿ ದಬಾಂಗ್ ತಂಡನ್ನು ಆಲೌಟ್ ಮಾಡಿದ ಬುಲ್ಸ್, 30 ನಿಮಿಷಗಳ ಅಂತ್ಯಕ್ಕೆ ಬೆಂಗಳೂರು ಬುಲ್ಸ್ ತಂಡ 20-12ರಲ್ಲಿ ಮೇಲುಗೈ ಸಾಧಿಸಿತು.

ಟ್ಯಾಕಲ್, ರೇಡಿಂಗ್ ಜತೆಗೆ ಆಲ್ ರೌಂಡ್ ಪ್ರದರ್ಶನ ನೀಡಿದ ಬೆಂಗಳೂರು ತಂಡ ಹತ್ತು ನಿಮಿಷಗಳ ಅಂತರದಲ್ಲಿ 15 ಅಂಕಗಳನ್ನು ಗಳಿಸಿ 29 -14ರಲ್ಲಿ ಮೇಲುಗೈ ಸಾಧಿಸಿತು. ಇದು ಸಹಜವಾಗಿಯೇ ದಬಾಂಗ್ ತಂಡದ ಮೇಲೆ ಒತ್ತಡವನ್ನು ಹೆಚ್ಚು ಮಾಡಿತು.

ಹಿನ್ನಡೆ ತಗ್ಗಿಸಲು ದಬಾಂಗ್ ಆಟಗಾರರು ಹರಸಾಹಸ ನಡೆಸಿದರೂ ಸಮನ್ವಯತೆ ಕೊರತೆ ಎದ್ದು ಕಂಡಿತು.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡ ವಿರಾಮಕ್ಕೆ 12-10ರಲ್ಲಿ ಮುನ್ನಡೆ ಕಾಯ್ದುಕೊಂಡಿತು.

 ಸತತ ನಾಲ್ಕು ಟ್ರೈಬ್ರೇಕರ್ ಪಂದ್ಯಗಳಲ್ಲಿ ಸೋಲನುಭವಿಸಿ ನಿರಾಸೆ ಕಂಡಿದ್ದ ಬೆಂಗಳೂರು ಗೆಲುವಿನ ಲಯಕ್ಕೆ ಮರಳುವ ಇರಾದೆಯೊಂದಿಗೆ ಕಣಕ್ಕಿಳಿಯಿತು. ಆದರೆ ಪಂದ್ಯ ಆರಂಭದಿಂದಲೂ ದಬಾಂಗ್ ದಿಲ್ಲಿ ತಂಡ ಪ್ರಬಲ ಪೈಪೋಟಿ ನೀಡಿತು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕಾರಣ ರೇಡರ್ ಗಳು ಅಂಕಗಳಿಸಲು ತಿಣುಕಾಡಿದರು. ಇದರ ನಡುವೆಯೂ ಬುಲ್ಸ್ ತಂಡ ವಿರಾಮದ ವೇಳೆಗೆ 2 ಅಂಕಗಳ ಮುನ್ನಡೆ ಗಳಿಸಿತು.

ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 22ರಂದು ಬೆಂಗಾಲ್ ವಾರಿಯರ್ಸ್ ತಂಡದ ಸವಾಲು ಎದುರಿಸಲಿದೆ.


administrator