ಬೆಂಗಳೂರು ಓಪನ್‌ಗೆ ಲ್ಯೂಕಾಸ್ ಪೊಯಿಲ್
ಬೆಂಗಳೂರು: ವಿಶ್ವದ ಮಾಜಿ ನಂ.10 ಆಟಗಾರ ಲ್ಯೂಕಾಸ್ ಪೊಯಿಲೆ ಹಾಗೂ ಕಳೆದ ವರ್ಷದ ಚಾಂಪಿಯನ್ ಚುನ್-ಹ್ಸಿನ್ ತ್ಸೆಂಗ್ ಫೆಬ್ರವರಿ 20ರಿಂದ 26ರವರೆಗೆ ನಡೆಯಲಿರುವ ಬೆಂಗಳೂರು ಓಪನ್ 2023ರ ಐದನೇ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್ಎಲ್ಟಿಎ) ಪ್ರತಿಷ್ಠಿತ ಎಟಿಪಿ ಚಾಲೆಂಜರ್ ಟೂರ್ನಿಯನ್ನು ಬೆಂಗಳೂರಿನ ಕೆಎಸ್ಎಲ್ಟಿಎ ಅಂಗಣದಲ್ಲಿ ಆಯೋಜಿಸಿದೆ.

ಬೆಂಗಳೂರು ಯಾವಾಗಲೂ ವಿಶ್ವದಾದ್ಯಂತದ ಟೆನಿಸ್ ಆಟಗಾರರ ನೆಚ್ಚಿನ ತಾಣವಾಗಿದೆ. ಈ ಬಾರಿಯೂ ಇದೇ ರೀತಿಯ ಪ್ರತಿಕ್ರಿಯೆಯನ್ನು ನೋಡಲು ನಮಗೆ ಸಂತೋಷವಾಗಿದೆ, ಏಕೆಂದರೆ ಕೆಲವು ಉನ್ನತ ಹೆಸರುಗಳು ಪ್ರಶಸ್ತಿಗಾಗಿ ಹೋರಾಡುತ್ತಿರುವುದನ್ನು ಕಾಣಬಹುದು. ಎಟಿಪಿ ಟೂರ್ ಅಥವಾ ಗ್ರ್ಯಾನ್ ಸ್ಪ್ಯಾಮ್‌ಗೆ ಪ್ರವೇಶಿಸಲು ಆಟಗಾರರಿಗೆ ಬೆಂಗಳೂರು ಓಪನ್ ಯಾವಾಗಲೂ ಒಂದು ಮೆಟ್ಟಿಲಾಗಿ ಕಾರ್ಯನಿರ್ವಹಿಸಿದೆ. ನಾವು ಟೂರ್ನಿ ಐದನೇ ಆವೃತ್ತಿಯನ್ನು ಆಚರಿಸುತ್ತಿದ್ದೇವೆ ಮತ್ತು ಮುಂಬರುವ ಆವೃತ್ತಿಯು ಭಾರತೀಯ ಟೆನಿಸ್ ಅಭಿಮಾನಿಗಳಿಗೆ ಹೆಚ್ಚು ರೋಮಾಂಚನಕಾರಿ ಆಟದ ಸೊಬಗು ಮತ್ತು ಔತಣವನ್ನು ತರುತ್ತದೆ,’’ ಎಂದು ನನಗೆ ಖಾತ್ರಿಯಿದೆ ಎಂದು ಬೆಂಗಳೂರು ಓಪನ್ ಟೂರ್ನಿಯ ನಿರ್ದೇಶಕ ಸುನಿಲ್ ಯಜಮಾನ್ ಹೇಳಿದರು.
ಫ್ರೆಂಚ್ ಟೆನಿಸ್ ತಾರೆ ಪೊಯಿಲ್ 2016 ರ ಯುಎಸ್ ಓಪನ್ಲ್ಲಿ ನಾಲ್ಕನೇ ಸುತ್ತಿನಲ್ಲಿ ರಾಫೆಲ್ ನಡಾಲ್ ಅವರನ್ನು ಸೋಲಿಸುವ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವನ್ನು ದಾಖಲಿಸಿದ್ದಾರೆ. 2019ರಲ್ಲಿಆಸ್ಪ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ತಲುಪಿದ್ದ 28ರ ಹರೆಯದ ಅವರು, 2016ರಲ್ಲಿ ವಿಂಬಲ್ಡನ್ ಹಾಗೂ ಯುಎಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಅವರು ಐದು ಎಟಿಪಿ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
 ಪೊಯಿಲೆ ಮತ್ತು ವಿಶ್ವದ 110 ನೇ ಶ್ರೇಯಾಂಕಿತ ತ್ಸೆಂಗ್ 32 ಆಟಗಾರರ ಸಿಂಗಲ್ಸ್ ಮುಖ್ಯ ಡ್ರಾದ ಭಾಗವಾಗಲಿದ್ದಾರೆ. ಕಳೆದ ವರ್ಷ ಕ್ವೀನ್ಸ್ ಕ್ಲಬ್ ಚಾಂಪಿಯನ್ಷಿಪ್ನ ಎಟಿಪಿ  ಪ್ರಧಾನ ಘಟ್ಟದ  ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 5 ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಅವರನ್ನು ನೇರ ಸೆಟ್ಗಳಲ್ಲಿಸೋಲಿಸುವ ಮೂಲಕ ಪೆನ್ಸ್ಟನ್ ಸುದ್ದಿಯಾಗಿದ್ದರು. 20ರ ಹರೆಯದ ಸ್ವರ್ಸಿನಾ ಈ ತಿಂಗಳ ಆರಂಭದಲ್ಲಿಆಸ್ಪ್ರೇಲಿಯಾದಲ್ಲಿಗ್ರ್ಯಾಡ್ ಸ್ಪ್ಯಾಮ್ಗೆ ಪಾದಾರ್ಪಣೆ ಮಾಡಿದ್ದರು. ಕಳೆದ ವರ್ಷ ಬೆಂಗಳೂರು ಓಪನ್ 2ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ದಿಮಿಟರ್ ಕುಜ್ಮಾನೊವ್, ನಗರಕ್ಕೆ ಮರಳಿದ ನಂತರ ಪ್ರತಿಷ್ಠಿತ ಪ್ರಶಸ್ತಿಯ ಗುರಿ ಹೊಂದಿದ್ದಾರೆ.

ಅರ್ಹತಾ ಪಂದ್ಯಗಳು ಫೆಬ್ರವರಿ 19 ರಿಂದ 20 ರವರೆಗೆ ನಡೆಯಲಿದ್ದು, ಟೂರ್ನಿಯ ಪ್ರಧಾನ ಘಟ್ಟ ಫೆಬ್ರವರಿ 20 ರಂದು ಪ್ರಾರಂಭವಾಗುತ್ತದೆ.