Sunday, May 19, 2024

ಈ ಬಾರಿಯೂ ಆಸ್ಟ್ರೇಲಿಯಾವೇ ವಿಶ್ವಕಪ್‌ ಚಾಂಪಿಯನ್‌ : ಶೇನ್‌ ವಾರ್ನ್‌

ನವದೆಹಲಿ:

ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯನ್ನು ಆ್ಯರೋನ್‌ ಫಿಂಚ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಜಯ ಸಾಧಿಸಲಿದೆ ಎಂದು ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2019ರ ವಿಶ್ವಕಪ್‌ ಯಾವ ತಂಡ ಗೆಲ್ಲಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿರುವ ನಡುವೆಯೇ ಹಲವು ಕ್ರಿಕೆಟ್‌ ಪಂಡಿತರು ಭಾರತ  ಹಾಗೂ ಇಂಗ್ಲೆಂಡ್‌ ತಂಡದ ಪರ ತಮ್ಮ ಅಭಿಪ್ರಾಯ ಹೊರಹಾಕಿದ್ದರು. ಆದರೆ, ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ ವಾರ್ನ್‌ ಅವರು ಫಿಂಚ್‌ ಪಡೆ ಪ್ರಶಸ್ತಿ ಗೆಲ್ಲಲಿದೆ ಎಂದು ಗೂಗ್ಲಿ ಎಸೆದಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ” ಆಸ್ಟ್ರೇಲಿಯಾದ ವಿಶ್ವಕಪ್‌ ಗೆಲುವಿನ ಲೆಕ್ಕಚಾರವನ್ನು ಕೇವಲ ಪ್ರದರ್ಶನ ಹಾಗೂ ಅಂಕಿ-ಅಂಶಗಳಿಂದ ಆಧರಿಸಿ ಹೇಳಿರುವ ವಾರ್ನ್‌, ಇದಕ್ಕಿಂತ ಮುಖ್ಯವಾಗಿ ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ ಅವರು ತಂಡಕ್ಕೆ ಮರಳಿರುವುದು ಆಸ್ಟ್ರೇಲಿಯಾ ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಹಾಗಾಗಿ, ಆಸೀಸ್‌ ವಿಶ್ವಕಪ್‌ ಟೂರ್ನಿ ಚಾಂಪಿಯನ್‌ ಆಗುವ ಎಲ್ಲ ಲಕ್ಷಣಗಳು ಇವೆ ಎಂದು ತಿಳಿಸಿದ್ದಾರೆ.

” ಕಳೆದ 12 ತಿಂಗಳಿನಿಂದ ಆಸ್ಟ್ರೇಲಿಯಾ ಕಳಪೆ ಪ್ರದರ್ಶನ ತೋರಿದೆ. ಹಾಗಾಗಿ, ಈ ಬಾರಿ ವಿಶ್ವಕಪ್ ಗೆಲ್ಲುವ ಫೆವರಿಟ್‌ ತಂಡಗಳಲ್ಲಿ ಫಿಂಚ್‌ ಪಡೆ ಹೊರತಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಕೆಲವು ತಿಂಗಳುಗಳಿಂದ ಆಸೀಸ್‌ ಪಡೆ ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ನಾಯಕ ಫಿಂಚ್‌, ಖವಾಜ ಶಾನ್‌ ಮಾರ್ಷ್‌. ಮ್ಯಾಕ್ಸ್‌ವೆಲ್‌ ಅತ್ಯುತ್ತಮ ಲಯದಲ್ಲಿದ್ದಾರೆ. ಜತೆಗೆ, ವಾರ್ನರ್‌ ಹಾಗೂ ಸ್ಮಿತ್‌ ಮರಳುವಿಕೆಯು ಆಸ್ಟ್ರೇಲಿಯಾ ಈ ಬಾರಿ ವಿಶ್ವಕಪ್‌ ಗೆಲ್ಲುವಿಕೆಯನ್ನು ಸ್ಪಷ್ಟಪಡಿಸಲಿದೆ” ಎಂದು ಹೇಳಿದರು.
“ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ವಿಶ್ವಕಪ್‌ ಗೆಲ್ಲುವ ಫೆವರಿಟ್‌ ತಂಡಗಳಾಗಿವೆ. ಆದರೆ, ಹಿಂದಿನ ವಿಶ್ವಕಪ್‌ ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ  ಆಸ್ಟ್ರೇಲಿಯಾ ಹೇಗೆ ಪ್ರದರ್ಶನ ತೋರಿ ಯಶಸ್ವಿಯಾಗಿದೆ ಎಂದು ಅರಿವಾಗಲಿದೆ.  ಆಡಿದ ಆರು ಮಹತ್ವದ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ನಾಲ್ಕರಲ್ಲಿ ಜಯ ಸಾಧಿಸಿದೆ. ಹಾಗಾಗಿ, ಇದನ್ನು ಆಧಿರಿಸಿ ಈ ಬಾರಿ ಆಸೀಸ್‌ ವಿಶ್ವಕಪ್‌ ಗೆಲ್ಲಲಿದೆ ಎಂಬುದದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಶೇನ್‌ ವಾರ್ನ್‌ ತಿಳಿಸಿದ್ದಾರೆ.
” ಸ್ಟೀವ್‌ ಸ್ಮಿತ್‌ ಮೌಲ್ಯಯುತ ಆಟಗಾರ. ಕಳೆದ ವರ್ಷ ಮಾರ್ಚ್‌ನಲ್ಲಿ ನೀವು ಗಮನಿಸಬಹುದು. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್‌ ಕೊಹ್ಲಿ, ಎ.ಬಿ ಡಿವಿಲಿಯರ್ಸ್‌, ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಹಾಗೂ ಕೇನ್‌ ವಿಲಿಯಮ್ಸನ್‌ ಈ ಅಗ್ರ ಐದರಲ್ಲಿ ನಮ್ಮವರು ಇಬ್ಬರು ಸ್ಥಾನ ಪಡೆದಿದ್ದಾರೆ. ಇದೀಗ ತಂಡಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ” ಎಂದು ನುಡಿದರು.

Related Articles