Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಪಿಲ್‌ದೇವ್ ಒಳಗೊಂಡ ಆಯ್ಕೆ ಸಮಿತಿ ರಚನೆ

ಮುಂಬೈ: 

ಮೊಟ್ಟ ಮೊದಲ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಮಾಜಿ ಆರಂಭಿಕ ಬ್ಯಾಟ್ಸ್  ಮನ್ ಅಂಶುಮಾನ್ ಗಾಯಕ್ವಾಡ್ ಹಾಗೂ ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿ ಶಾಂತ ರಂಗಸ್ವಾಮಿ ಅವರನ್ನೊೊಳಗೊಂಡ ಆಯ್ಕೆ ಸಮಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರಚಿಸಿದೆ.

ಈ ಸಮಿತಿ ಇದೇ 20 ರಂದು ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಭಾರತ ಮಹಿಳಾ ತಂಡದ ಮುಖ್ಯ ತರಬೇತುದಾರ ಆಯ್ಕೆಗೆ ಸಂಬಂಧಿಸಿದಂತೆ ಸಂದರ್ಶನ ನಡೆಸಲಿದೆ. ಈ ಕುರಿತು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಿತು.
ಇತ್ತೀಚೆಗೆ ಮುಕ್ತಾಯವಾಗಿದ್ದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್ ಅವರಿಗೆ ಅವಕಾಶ ನೀಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡು ಹಲವು ಕ್ರಿಕೆಟ್ ದಿಗ್ಗಜರಿಂದ ಟೀಕೆಗೆ ಗುರಿಯಾಗಿತ್ತು. ಮಿಥಾಲಿ ರಾಜ್ ಅವರನ್ನು ಆಡಿಸದೆ ತರಬೇತುದಾರ ರಮೇಶ್ ಪೊವಾರ್ ಅವರ ನಡೆಯನ್ನು ಹಲವರು ಪ್ರಶ್ನಿಸಿದ್ದರು.
ಹಾಗೆಯೇ, ಮಿಥಾಲಿ ರಾಜ್ ಅವರೂ ಕೂಡ ತಮ್ಮ ಅತೃಪ್ತಿ ಹೊರಹಾಕಿದ್ದರು. ಜತೆಗೆ, ಬಿಸಿಸಿಐಗೆ ಪತ್ರ ಬರೆದಿದ್ದರು. ಇದಕ್ಕಿಿಂತ ಮುಖ್ಯವಾಗಿ ರಮೆಶ್ ಪೊವಾರ್ ಒಪ್ಪಂದದ ಅವಧಿ ಮುಕ್ತಾಾಯವಾದ ಹಿನ್ನಲೆಯಲ್ಲಿ ಪೂರ್ಣಾವಧಿ ತರಬೇತುದಾರರ ಆಯ್ಕೆಗೆ ಬಿಸಿಸಿಐ ಮುಂದಾಗಿದೆ.

administrator