ರಾಷ್ಟ್ರೀಯ ವಾಲಿಬಾಲ್: ಕೆಎಸ್ಇಬಿ ತಂಡಕ್ಕೆ ಚಾಂಪಿಯನ್ ಪಟ್ಟ
ಕುಂದಾಪುರ: ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಹಾಗೂ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಇವರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಆಹ್ವಾನಿತ ವಾಲಿಬಾಲ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಇಂಡಿಯನ್ ನೇವಿ ತಂಡವನ್ನು ಸೋಲಿಸಿದ ಕೇರಳ ರಾಜ್ಯ ಎಲೆಕ್ಟ್ರಿಸಿಟಿ ಬೋರ್ಡ್ (ಕೆಎಸ್ಇಬಿ) ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. In the final of the National Invitational Volleyball Championship held in Kundapura, the Kerala State Electricity Board (KSEB) team defeated Indian Navy to clinch the championship title.
ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಕೆಎಸ್ಇಬಿ ತಂಡ 17-25, 25-23, 23-25, 25-18, 15-12 ಅಂತರದಲ್ಲಿ ಜಯ ಗಳಿಸಿ ಆಕರ್ಷಕ ಟ್ರೋಫಿ ಹಾಗೂ 4 ಲಕ್ಷ ರೂ, ನಗದು ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ತಂಡ ಇಂಡಿಯನ್ ನೇವಿ, 3 ಲಕ್ಷ ರೂ ,ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಗೆದ್ದುಕೊಂಡಿತು. ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೂರನೇ ಸ್ಥಾನ ಹಾಗೂ ಕರ್ನಾಟಕ ಸಿಕ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು. ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ಅನುಕ್ರಮವಾಗಿ 2 ಹಾಗೂ 1 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.


ಕೆಎಸ್ಇಬಿ ತಂಡದ ಅರವಿಂದನ್ ಬೆಸ್ಟ್ ಸೆಟ್ಟರ್, ಕೆಎಸ್ಇಬಿಯ ಶಾನ್ ಬೆಸ್ಟ್ ಅಟ್ಯಾಕರ್, ಇಂಡಿಯನ್ ನೇವಿ ತಂಡದ ಚಿರಾಗ್ ಬೆಸ್ಟ್ ಆಲ್ರೌಂಡರ್, ಇಂಡಿಯನ್ ನೇವಿ ತಂಡದ ರಮಾನಂದ್ ಬೆಸ್ಟ್ ಲಿಬ್ರೋ ಹಾಗೂ ಕೆಎಸ್ಇಬಿ ತಂಡದ ಜಾನ್ ಬೆಸ್ಟ್ ಬ್ಲಾಕರ್ ಗೌರವಕ್ಕೆ ಪಾತ್ರರಾದರು. ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದ ಆಟಗಾರರಿಗೆ ಆಕರ್ಷಕ ಟ್ರೋಫಿ ಹಾಗೂ ತಲಾ 25,000 ರೂ ,ನಗದು ಬಹುಮಾನ ನೀಡಲಾಯಿತು. ಪತ್ರಕರ್ತ ಕೆ ಸಿ ರಾಜೇಶ್ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮ ನೀರೂಪಿಸಿದರು.

