ಅಗಲಿದ ತಂದೆಯ ಭಾವಚಿತ್ರದೊಂದಿಗೆ ಪದಕ ಸ್ವೀಕರಿಸಿದ ಸಿಂಧೂಶ್ರೀ
ಬೆಂಗಳೂರು: ಏಷ್ಯನ್ ಗೇಮ್ಸ್ ಆಯ್ಕೆಗಾಗಿ ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವಿಸ್ಮರಣೀಯ ಘಟನೆಯೊಂದು ನಡೆಯಿತು. ಕರ್ನಾಟಕದ ಭದ್ರಾವತಿಯ ಸಿಂಧೂಶ್ರೀ ಗಣೇಶ್ ಅವರು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿ, ಚಿನ್ನ ಗೆದ್ದು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದರು. ಪದಕ ಸ್ವೀಕರಿಸುವ ಅಗಲಿದ ತಮ್ಮ ತಂದೆಯ ಭಾವಚಿತ್ರ ಹಿಡಿದು ಚಿನ್ನದ ಪದಕ ಸ್ವೀಕರಿಸಿದ ಭಾವುಕ ಕ್ಷಣ ಕ್ರೀಡಾಕೂಟದಲ್ಲಿ ಅಪೂರ್ವವೆನಿಸಿತು. Sindhushree from Karnataka, who was selected for the Asian Games in Japan with a national record, accepted the honor on the podium holding a portrait of her late father Ganesh Bhadravathi.
ಗುರುವಾರ ಕರ್ನಾಟಕದ ಉನ್ನತಿ ಅಯ್ಯಪ್ಪ ಹಾಗೂ ಪ್ರಕೃತಿ 200 ಮೀ ಓಟದಲ್ಲಿ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಇತರ ಕ್ರೀಡಾ ಸಾಧಕರು.
ಸಿಂಧೂಶ್ರೀ ಗಣೇಶ್ 20ನೇ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಬ್ಯಾನರ್ ಒಂದು ಕೈಯಲ್ಲಿ ಹಿಡಿದಿದ್ದರೆ ಇನ್ನೊಂದು ಕೈಯಲ್ಲಿ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಿಡಿದಿದ್ದರು. 4.25 ಮೀ. ಎತ್ತರಕ್ಕೆ ಜಿಗಿದ ಸಿಂಧೂಶ್ರೀ ಗಣೇಶ್ ಈಗ ವನಿತೆಯರ ಪೋಲ್ ವಾಲ್ಟ್‌ನಲ್ಲಿ ದೇಶಕ್ಕೆ ನಂಬರ್ ಒನ್.

ತಂದೆಯ ನೆನೆದು ಭಾವುಕರಾದ ಸಿಂದೂಶ್ರೀ: ಇನ್ನೊಂದು ಕೈಯಲ್ಲಿ ಹಿಡಿದ ಫೋಟೋ ಯಾರದ್ದು ಎಂದು ಕೇಳಿದಾಗ, ಸಿಂಶೂಶ್ರೀ ಸ್ವಲ್ಪ ಹೊತ್ತು ಮೌನಿಯಾದರು. ಬಳಿಕ, “ನಮ್ಮ ತಂದೆ ಗಣೇಶ್, 2022ರಲ್ಲಿ ಹೃದಯಾಘಾತದಿಂದ ನಮ್ಮನ್ನಗಲಿದರು. ನಮ್ಮ ತಾತ ಕೃಷ್ಣಪ್ಪ ಅವರು ನಮ್ಮನ್ನು ಆರೈಕೆ ಮಾಡಿದರು. ಸಿಂಶ್ರೀ ಅವರ ಸಹೋದರಿ ಸ್ನೇಹ ಈಗಷ್ಟೇ ಪದವಿ ಪರೀಕ್ಷೆ ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಭುವನೇಶ್ವರದಿಂದ sportsmail ಜೊತೆ ಮಾತನಾಡಿದ ಸಿಂಧೂಶ್ರೀ, “ನಮ್ಮ ತಂದೆ ಭದ್ರಾವತಿಯ MPM ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿ ಮುಚ್ಚಿದ ಬಳಿಕ ಭದ್ರಾವತಿಯಲ್ಲೇ ಎಲೆಕ್ಟ್ರಿಷನ್ ಆಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಹೃದಯಾಘಾತದಿಂದ ತಂದೆ ನಮ್ಮನ್ನಗಲಿದ ಬಳಿಕ ಅಮ್ಮ ಮಂಜುಳಾಗೆ ಬದುಕು ಕಷ್ಟವಾಯಿತು. ಆಗ ತಾತ ಕೃಷ್ಣಪ್ಪ ನಮ್ಮ ಆರೈಕೆ ಮಾಡಿದರು. ಭಾರತೀಯ ಕ್ರೀಡಾ ಪ್ರಾಧಿಕಾರದ “ಕಮ್ ಆಂಡ್ ಪ್ಲೇ [Come and Play Scheme]” ಯೋಜನೆ ಮೂಲಕ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದೇವೆ. ವಿಜೀಶ್ ಅವರು ನನಗೆ ತರಬೇತಿ ನೀಡುತ್ತಿದ್ದಾರೆ,” ಎಂದರು.

ಅಪ್ಪ ಯಾವಾಗಲೂ ನನ್ನೊಂದಿಗೇ ಇರುತ್ತಾರೆ: ಅಪ್ಪನ ಭಾವಚಿತ್ರ ಹಿಡಿದು ಪೋಡಿಯಂನಲ್ಲಿ ಗೌರವ ಸ್ವೀಕರಿಸಿದ ಬಗ್ಗೆ ಮಾತನಾಡಿದ, ಸಿಂಧೂಶ್ರೀ, “ಯಾವತ್ತೂ ನಾನು ಅಪ್ಪನ ಭಾವಚಿತ್ರದೊಂದಿಗೆ ಪ್ರಯಾಣಿಸುತ್ತೇವೆ, ಅವರು ನಮ್ಮನ್ನಗಲಿದರೂ ಈಗಲೂ ನನ್ನೊಂದಿಗೆ ಇದ್ದಾರೆ ಎಂದು ನಂಬಿರುವೆ. ಇವತ್ತು ಅವರು ಕ್ರೀಡಾಂಗಣದಲ್ಲೇ ಇದ್ದರು ಎಂದು ನಂಬಿದ್ದೆ, ಹಾಗೆ ಪೋಡಿಯಂಗೂ ಬಂದರು. ಇದಕ್ಕಾಗಿಯೇ ಕೈಯಲ್ಲಿ ಭಾವಚಿತ್ರ ಹಿಡಿದೆ,” ಎಂದು ಸಿಂಧೂಶ್ರೀ ಅತೀ ಭಾವುಕರಾದರು.
ಕಳೆದ ಹತ್ತು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿರುವ ಸಿಂಧೂಶ್ರೀ ಗಣೇಶ್ ಎರಡು ಬಾರಿ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುತ್ತಾರೆ.


