ಏಳು ಗೋಲುಗಳನ್ನು ತಡೆದ ಆ “ಪುಟ್ಟ ಅಜ್ಜಿ” ಯಾರು?
ನ್ಯೂಯಾರ್ಕ್: ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ಗೋಲು ಗಳಿಸುವಲ್ಲಿ ತಡೆಯೊಡ್ಡಿದ ಕೋಪ್ ವಾರ್ಡೆ ತಂಡದ ಗೋಲ್ಕೀಪರ್ ಒಝಿನ್ಹಾ ಈಗ ಫುಟ್ಬಾಲ್ ಜಗತ್ತಿನ ಆಕರ್ಷಣೆ ಎನಿಸಿದ್ದಾರೆ. Vozinha his full name is actually Josimar Jose Evora Dias, and his nickname Vozinha means “little grandma” in Cape Verde Creole.
ಸೋಮವಾರದ ಪಂದ್ಯದಲ್ಲಿ ಸ್ಪೇನ್ನ ಆಟಗಾರರು ಗೋಲ್ಬಾಕ್ಸಿಗೆ ಏಳು ಬಾರಿ ಗುರಿ ಇಟ್ಟಾಗ ತಡೆದು ಜಗತ್ತನ್ನೇ ಅಚ್ಚರಿಗೊಳಿಸಿದ ಈ ಅಪೂರ್ವ ಫುಟ್ಬಾಲ್ ಗೋಲ್ಕೀಪರ್ ಒಝಿನ್ಹಾ ನಿಜವಾದ ಹೆಸರು ಜೊಸಿಮಾರ್ ಜೋಸ್ ಎವೊರಾ ಡಿಯಾಸ್. ಆದರೆ ಈತನಿರುವ ನಿಕ್ ನೇಮ್ ಅಂದರೆ ಅಡ್ಡ ಹೆಸರು “ಒಝಿನ್ಹಾ” ಅಂದರೆ ಕೇಪ್ ವರ್ಡೆಯಲ್ಲಿನ ಭಾಷೆಯಲ್ಲಿ ಯಲ್ಲಿ “ಪುಟ್ಟ ಅಜ್ಜಿ” ಎಂದರ್ಥ. ಅಜ್ಜಿಯ ಆರೈಕೆಯಲ್ಲಿ ಬೆಳೆದ ಕಾರಣಕ್ಕೆ ಜೊಸಿಮಾರ್ ಜೋಸ್ ಎವೊರಾ ಡಿಯಾಸ್ ಅವರನ್ನು “ಒಝಿನ್ಹಾ” ಅಂದರೆ “ಪಟ್ಟ ಅಜ್ಜಿ” ಎಂದು ಪ್ರೀತಿಯಿಂದ ಕರೆಯುತ್ತಾರೆ. ಚಿಕ್ಕಂದಿನಲ್ಲಿ ಸಾವೋ ವಿನ್ಸೆಂಟ್ ದ್ವೀಪದಲ್ಲಿ ಅಜ್ಜ ಅಜ್ಜಿಯರ ಆರೈಕೆಯಲ್ಲಿ ಬೆಳೆದ ಜೊಸಿಮಾರ್ ಜೋಸ್ ಎವೊರಾ ಡಿಯಾಸ್ ಅವರೊಂದಿಗೆ ಪ್ರೀತಿಯ ಅಜ್ಜಿ ಇನ್ನೂ ಜೊತೆಯಲ್ಲಿದ್ದಾರೆ.
40 ವರ್ಷದ ಒಝಿನ್ಹಾ ಈ ಬಾರಿಯ ವಿಶ್ವಕಪ್ಗೆ ಪದಾರ್ಪಣೆ ಮಾಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಕೇವಲ 50 ಸಾವಿರ. ಈಗ 5 ದಶಲಕ್ಷ ದಾಟಿದೆ. ವಿಶ್ವಕಪ್ಗೂ ಮುನ್ನ ಒಝಿನ್ಹಾ ಅವರ ಮಾರುಕಟ್ಟೆ ಬೆಲೆ ಕೇವಲ 50ಲಕ್ಷ ಇನ್ನು ಅವರ ಮಾರುಕಟ್ಟೆ ಬೆಲೆ ಹೆಚ್ಚಾಗಬಹುದು.

