ಬದಲಿ ಆಟಗಾರ ಗಳಿಸಿ ಗೋಲಿನಿಂದ ದಕ್ಷಿಣ ಕೊರಿಯಾಕ್ಕೆ ಜಯ
ಮೆಕ್ಸಿಕೋ: ಬದಲಿ ಆಟಗಾರ ಹೊ ಹೆಯಾನ್ ಗ್ಯೂ ಗಳಿಸಿದ ಗೋಲಿನಿಂದ ದಕ್ಷಿಣ ಕೊರಿಯಾ ತಂಡವು ಫಿಫಾ ವಿಶ್ವಕಪ್ ಎರಡನೇ ಪಂದ್ಯದಲ್ಲಿ ಚೆಕ್ ಗಣರಾಜ್ಯದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. South Korea came from behind to defeat Czech Republic 2-1 as substitute Oh Hyeon-gyu scored the winning goal in the 80th minute of their World Cup opener.
ನಾಯಕ ಲೆಡಿಸ್ಲಾವ್ ಕ್ರೆಜ್ಸಿ 59ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಚೆಕ್ ಗಣರಾಜ್ಯ 1-0 ಅಂತರದಲ್ಲಿ ಮುನ್ನಡೆ ಕಂಡಿತ್ತು. ಆದರೆ ನಾಯಕ ಸನ್ ಹ್ಯುಂಗ್ ಮಿನ್ ಅವರ ಪಡೆ ಚೆಕ್ ಗಣರಾಜ್ಯಕ್ಕೆ ಮತ್ತೆ ಅವಕಾಶ ನೀಡಲಿಲ್ಲ, ಹ್ವಾಂಗ್ ಇನ್ ಬಿಯೋಮ್ 67ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ದಕ್ಷಿಣ ಕೊರಿಯಾ 1-1 ಅಂತರದಲ್ಲಿ ಸಮಬಲ ಸಾಧಿಸಿತು. 80ನೇ ನಿಮಿಷದಲ್ಲಿ ಬದಲಿ ಆಟಗಾರ ಹೊ ಹೆಯಾನ್ ಗ್ಯೂ ಗಳಿಸಿದ ಗೋಲಿನಿಂದ ದಕ್ಷಿಣ ಕೊರಿಯಾ 2-1 ಗೋಲಿನಿಂದ ಪಂದ್ಯ ಗೆದ್ದಿತು.

