ಥಾಯ್ಲೆಂಡ್‌ನಲ್ಲಿ ಇತಿಹಾಸ ಬರೆದ ಕುಂದಾಪುರದ ಫೈಟರ್ ಅನೀಶ್ ಶೆಟ್ಟಿ
ಬೆಂಗಳೂರು: ನಾಲ್ಕು ದಿನಗಳ ಹಿಂದೆ ಥಾಯ್ಲೆಂಡ್‌ನಲ್ಲಿರುವ ಜಗತ್ತಿನ ಮೊದಲ ಮೊಯ್ ಥಾಯ್ ಕ್ರೀಡಾಂಗಣ ಹಾಗೂ ಅಲ್ಲಿಯ ರಾಷ್ಟ್ರೀಯ ಕ್ರೀಡಾಂಗಣವಾದ ರಾಜಾದಮ್ನರೆನ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಕಿಕ್ ಬಾಕ್ಸಿಂಗ್ ಅಭಿಮಾನಿಗಳ ಸಮ್ಮುಖದಲ್ಲಿ “ಅನೀಶ್ ಶೆಟ್ಟಿ ಫ್ರಾಮ್ ಇಂಡಿಯಾ” ಎಂಬ ಹೆಸರು ಮಾರ್ಧನಿಗೊಂಡಿತು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪ್ರವೃತ್ತಿಯಲ್ಲಿ ಮೊಯ್ ಥಾಯ್ ಕಿಕ್ ಬಾಕ್ಸರ್ ಆಗಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮ ಕಟ್ಕೆರೆಯ ಅನೀಶ್ ಶೆಟ್ಟಿ ಎದುರಾಳಿಯನ್ನು ಸೋಲಿಸಿ ವೃತ್ತಿ ಬದುಕಿನ ಏಳನೇ ಫೈಟ್ ಗೆದ್ದಾಗ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಅನೀಶ್ ಶೆಟ್ಟಿ ಅವರು ಈ ಸಾಧನೆಯ ಮೂಲಕ ಈ ಅಂಗಣದಲ್ಲಿ ಮೊಯ್ ಥಾಯ್ ಫೈಟ್ ಗೆದ್ದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.Anish Shetty becomes only the 5th Indian fighter to secure victory at the iconic Rajadamnern Stadium, further elevating India’s presence on the global Muaythai stage.
ಅನೀಶ್ ಶೆಟ್ಟಿ ಅವರು ಥಾಯ್ಲೆಂಡಿನ ಸಿತ್‌ಜಾವೊಫೋ ಜಿಮ್ ಪ್ರತಿನಿಧಿಸುತ್ತಿದ್ದು, ಕೆನಡಾದ ಫೈಟರ್ ರಾಬರ್ಟ್ ಒಟಾರೊಲಾ ಥಾಯ್ಲೆಂಡಿನ ಸಿಟ್ಮೋಚಾಯ್ ಜಿಮ್ ಪ್ರತಿನಿಧಿಸುತ್ತಿದ್ದಾರೆ. ಎಲ್ಲರೂ ಕೆನಡಾದ ರಾಬರ್ಟ್ ಗೆಲ್ಲುತ್ತಾನೆಂದು ನಂಬಿದ್ದರು. ಆದರೆ ಕಳೆದ ಎಂಟು ವರ್ಷಗಳಿಂದ ಹೆಚ್ಚು ಸದ್ದು ಮಾಡದೆ ಕೆಲಸದ ನಡುವೆ ಥಾಯ್ಲೆಂಡ್‌ಗೆ ಹೋಗಿ ಅಭ್ಯಾಸ ನಡೆಸುತ್ತಿರುವ ಅನೀಶ್ ಶೆಟ್ಟಿ ಮೂರು ಸುತ್ತುಗಳ ಹೋರಾಟದಲ್ಲಿ 30-27 ಅಂತರದಲ್ಲಿ ಜಯ ಗಳಿಸಿದರು. ಅನೀಶ್ ಇದುವರೆಗೂ 11 ಫೈಟ್‌ಗಳಲ್ಲಿ ಭಾಗಿಯಾಗಿದ್ದು, 7ರಲ್ಲಿ ಜಯ ಗಳಿಸಿದ್ದಾರೆ. ರಾಬರ್ಟ್ 20 ಫೈಟ್‌ಗಳಲ್ಲಿ ಭಾಗಿಯಾಗಿರುವ ಅನುಭವಿ ಫೈಟರ್. ಆದರೆ ಅನೀಶ್ ಶೆಟ್ಟಿ ಅವರ ಪಂಚ್ ಮತ್ತು ಕಿಕ್‌ನಲ್ಲಿ ತಾಂತ್ರಿಕವಾಗಿ ಬಲಿಷ್ಠರಾಗಿರುದುವುದು ಕಂಡು ಬಂತು. ಮೂರೂ ಸುತ್ತಿನಲ್ಲೂ ಮೇಲುಗೈ ಸಾಧಿಸಿ ಸಂಭ್ರಮಿಸಿರು.


ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅನೀಶ್ ಶೆಟ್ಟಿ ಮೊಯ್ ಥಾಯ್ ಕ್ರೀಡೆಯನ್ನು ತನ್ನ ಹವ್ಯಾಸಕ್ಕಾಗಿ ಬಳಸಿಕೊಂಡವರು. ಅನೀಶ್ ಶೆಟ್ಟಿ ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್ ಆಟಗಾರ. ಕಾಲೇಜು ತಂಡದ ನಾಯಕರೂ ಆಗಿದ್ದರು. ಕೋಟೇಶ್ವರದ ಕಟ್ಕೆರೆಯ ಶಂಕರ ಶೆಟ್ಟಿ ಹಾಗೂ ಉಷಾ ಶೆಟ್ಟಿ ದಂಪತಿಯ ಮಗ, ಪ್ರಾಥಮಿಕ ಶಿಕ್ಷಣ ಕುಂದಾಪುರದ ಸೇಂಟ್ ಮೆರೀಸ್ ಶಾಲೆಯಲ್ಲಿ, ನಂತರ ಕೋಟ ವಿವೇಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ. ಮೂಡಬಿದಿರೆಯ ಆಳ್ವಾಸ್ ನಲ್ಲಿ ಪಿಯುಸಿ, ನಂತರ ಮೂಡ್ಳಕಟ್ಟೆಯಲ್ಲಿ ತಾಂತ್ರಿಕ ಪದವಿ ಪಡೆದವರು.
ಪ್ರೋತ್ಸಾಹದ ಅಗತ್ಯವಿದೆ:

ಆರು ವರ್ಷಗಳ ಹಿಂದೆ ಅನೀಶ್ ಶೆಟ್ಟಿ ಅವರ ಕುರಿತು sportsmail ವಿಶೇಷ ವರದಿ ಪ್ರಕಟಿಸಿತ್ತು. ಈ ಬಾರಿಯೂ ಅನೀಶ್ ಶೆಟ್ಟಿ ಗೆದ್ದ ಕೂಡಲೇ sportsmail ಜೊತೆ ಮಾತನಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ. “ನಮ್ಮಲ್ಲಿ ಕ್ರಿಕೆಟ್‌ಗೆ ಇರುವಷ್ಟು ಪ್ರೋತ್ಸಾಹ, ಪ್ರಚಾರ ಇತರ ಕ್ರೀಡೆಗಳಿಗಿಲ್ಲ ಎಂಬುದು ಸ್ಪಷ್ಟ. ಕಳೆದ ಎಂಟು ವರ್ಷಗಳಲ್ಲಿ 11 ಫೈಟ್ ಮಾಡಿದ್ದೇವೆ, ಅದರಲ್ಲಿ 7 ಫೈಟ್‌ಗಳಲ್ಲಿ ಗೆದ್ದಿರುವೆ. ನನ್ನ ಸ್ಪರ್ಧೆಯ ವಿವರ ಮನೆಯವರಿಗೂ ಗೊತ್ತಿರುವುದಿಲ್ಲ. ಇದು ಅತ್ಯಂತ ಅಪಾಯಕಾರಿಯಾದ ಕ್ರೀಡೆ. ತಾಂತ್ರಿಕವಾಗಿ ಬಲಿಷ್ಠರಾಗಿರಬೇಕು. ಇಲ್ಲವಾದಲ್ಲಿ ಸೋಲು ಖಚಿತ. ಈ ಕ್ರೀಡೆಗೆ ಪ್ರೋತ್ಸಾಹದ ಅಗತ್ಯವಿದೆ,” ಎಂದು ಹೇಳಿದರು.
ಮೊದಲ ಫೈಟ್ ಗೆದ್ದಾಗ

