ಸಿಬಿಸಿ ಬೇಸಿಗೆ ಶಿಬಿರಕ್ಕೆ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಪ್ರೋತ್ಸಾಹ
ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಬೆಳಗುತ್ತಿರುವ ಕುಂದಾಪುರದ ಹಳಅಳಿವೆಯಲ್ಲಿರುವ ಕೋಸ್ಟಾ ಬ್ಯಾಡ್ಮಿಂಟನ್ ಸಂಸ್ಥೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಅಧ್ಯಕ್ಷರು ಹಾಗೂ ಅದರ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದೆ. Costa Badminton Center, located in Halealive, Kundapura Taluk, has expressed its gratitude to the President of the Karnataka State Badminton Association and its office bearers.
ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಕೆಬಿಎ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳು ಸಂದರ್ಭದಲ್ಲಿ “ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಒತ್ತು ನೀಡಲಾಗುವುದು,” ಎಂದು ಹೇಳಿದ್ದರು. ಅದರಂತೆ ಗ್ರಾಮೀಣ ಪ್ರದೇಶದಲ್ಲಿರುವ ಕೋಸ್ಟಾ ಬ್ಯಾಡ್ಮಿಂಟನ್ ಸಂಸ್ಥೆಗೆ ಅಗತ್ಯವಿರುವ ಸಲಕರಣೆ ಒದಗಿಸಿ, ನುಡಿದಂತೆ ನಡೆದುಕೊಂಡಿರುವುದು ಅವರ ಕ್ರೀಡಾ ಬದ್ಧತೆಗೆ ನಿದರ್ಶನ.

ಕೋಸ್ಟಾ ಬ್ಯಾಡ್ಮಿಂಟನ್ ಕೇಂದ್ರದಲ್ಲಿ ಈಗ ಬೇಸಿಗೆ ಶಿಬಿರ ನಡೆಯುತ್ತಿದ್ದು, ಶಿಬಿರಕ್ಕೆ ಅಗತ್ಯವಿರುವ ಶಟ್ಲ್ಗಳನ್ನು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಒದಗಿಸಿದೆ. ಇದರಿಂದಾಗಿ ಇಲ್ಲಿನ ಶಿಬಿರಾರ್ಥಿಗಳಿಗೆ ಹೆಚ್ಚಿನ ಸಮಯವನ್ನು ಆಟಕ್ಕೆ ವಿನಿಯೋಗಿಸಿಕೊಳ್ಳಲು ಸಾಧ್ಯವಾಗಿದೆ.
ಈ ಕುರಿತು ಮಾತನಾಡಿದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ನಿರ್ದೇಶಕರಾದ ಅಜಿತ್ ಡಿʼಕೋಸ್ಟಾ, “ನಮ್ಮ ಸಂಸ್ಥೆ ಎರಡು ವರ್ಷ ಪೂರ್ಣಗೊಳಿಸಿದೆ. ನಮ್ಮ ಕ್ಲಬ್ನ ಕೆಲವು ಆಟಗಾರರು ಉಡುಪಿ ಜಿಲ್ಲಾ ಮಟ್ಟದಲ್ಲಿ ಹಾಗೂ ಮೈಸೂರು ವಿಭಾಗೀಯ ಮಟ್ಟದಲ್ಲಿ ಮಿಂಚಿದ್ದಾರೆ. ದಿನದ ವಿವಿಧ ಅವಧಿಯಲ್ಲಿ ಸದಸ್ಯರು ಬಂದು ಆಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ತನ್ನದೇ ಆದ ಇತಿಮಿತಿಯನ್ನು ಹೊಂದಿದೆ. ಇದನ್ನು ಗಮನಿಸಿದ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯು ನಮಗೆ ಅಗತ್ಯವಿರುವ ಶಟ್ಲ್ ಒದಗಿಸಿದೆ. ಇದರಿಂದ ನಮಗೆ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಾವು ಇಲ್ಲಿಯ ಯುವ ಆಟಗಾರರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿ, ಅವರು ವಿವಿಧ ಮಟ್ಟದ ಟೂರ್ನಿಗಳಲ್ಲಿ ಹೆಚ್ಚು ಪದಕ ಗೆಲ್ಲುಂತೆ ಮಾಡುವ ಆತ್ವಮಿಶ್ವಾದ ಬಂದಿದೆ.” ಎಂದು ಹೇಳಿದರು.

