ಆಯುಷ್ ಶೆಟ್ಟಿಗೆ ಆತ್ಮೀಯ ಸ್ವಾಗತ ಕೋರಿದ ಕುಮಾರ್ ಬಂಗಾರಪ್ಪ
ಬೆಂಗಳೂರು: 60 ವರ್ಷಗಳ ನಂತರ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕರ್ನಾಟಕದ ಆಯುಷ್ ಶೆಟ್ಟಿ ಅವರನ್ನು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಆತ್ಮೀಯವಾಗಿ ಬರಮಾಡಿಕೊಂಡರು. Karnataka State Badminton Association President Kumar Bangarappa has wished Ayush Shetty all the best for his future endeavours, saying that his victory has created a new sensation in the world of sports.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾದ ಆಯುಷ್ ಶೆಟ್ಟಿ ಈ ಬಾರಿಯ ಏಷ್ಯನ್ ಚಾಂಪಿಯನ್ಷಿನ್ನ ಫೈನಲ್ ತಲಪುವ ಹಾದಿಯಲ್ಲಿ ಜಗತ್ತಿನ ಶ್ರೇಷ್ಠ ಆಟಗಾರರನ್ನು ಸೋಲಿಸಿರುವುದು ಗಮನಾರ್ಹವಾದುದು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಯುಷ್ ಅವರನ್ನು ಬರಮಾಡಿಕೊಂಡು ಸನ್ಮಾನಿಸಿದ ಕುಮಾರ ಬಂಗಾರಪ್ಪ ಅವರು, “ಆಯುಷ್ ಅವರ ಈ ಗೆಲುವು ಕ್ರೀಡಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,” ಶುಭ ಹಾರೈಸಿದ್ದಾರೆ.
ಇದೇ ಮೊದಲು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರು ಒಬ್ಬ ಚಾಂಪಿಯನ್ ಕ್ರೀಡಾಪಟುವನ್ನು ತನ್ನ ಪದಾಧಿಕಾರಿಗಳೊಂದಿಗೆ ಹೋಗಿ ಸನ್ಮಾನ ಮಾಡಿ ಬರ ಮಾಡಿಕೊಂಡಿದ್ದು ಇದೇ ಮೊದಲು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕುಮಾರ ಬಂಗಾರಪ್ಪ ಜೊತೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿ. ಮುರಳೀಧರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎನ್ ಸಿ ಸುಧೀರ್, ಹರೀಶ್ ಕುಮಾರ್ ಬಿ, ಆರ್, ಸಂಚಾಲಕರಾದ ಡಾ, ನಿಶಾಂತ್, ಇಂಡೋನೇಷ್ಯಾದ ಕೋಚ್ ಆದಿ ಪ್ರಥಮ ಮೊದಲಾದವರು ಹಾಜರಿದ್ದರು. ಆಯುಷ್ ಶೆಟ್ಟಿ ಈಗ ವಿಶ್ವ ರಾಂಕಿಂಗ್ನಲ್ಲಿ 18ನೇ ಸ್ಥಾನ ತಲುಪಿರುವುದು ಹೆಮ್ಮೆಯ ಸಂಗತಿ.

