ಕಾಸಿನ ಮುಂದೆ ನಡೆಯದ ಪಾಕಿಸ್ತಾನದ ಆಟ
ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವೆ ಫೆಬ್ರವರಿ 15 ರಂದು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಬಾಂಗ್ಲಾದೇಶದ ಬೆಂಬಲಕ್ಕಾಗಿ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂದು ಹಾರುತ್ತಿದ್ದ ಪಾಕಿಸ್ತಾನ ಕೊನೆಗೂ ಹಣದ ಆಸೆಯಿಂದ ಆಡಲು ಸಜ್ಜಾಗಿದೆ. Why did Pakistan take U Turn on ICC T20 world cup match against India
ಪಾಕಿಸ್ತಾನ ಹಾಗೂ ಭಾರತ ನಡುವಿನ ಪಂದ್ಯವಿಲ್ಲವೆಂದರೆ ಕ್ರಿಕೆಟ್ಗೆ ಬೆಲೆಯೇ ಇಲ್ಲ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC)ಗೂ ಚೆನ್ನಾಗಿ ಗೊತ್ತಿದೆ. ಈ ಪಂದ್ಯ ನಡೆಯದಿದ್ದರೆ ಐಸಿಸಿಗೆ 1470 ಕೋ. ರೂ. ನಷ್ಟವಾಗುತ್ತಿದೆ. ಪಾಕಿಸ್ತಾನಕ್ಕೆ ಪಡಿಕಾಸೂ ಸಿಗುವುದಿಲ್ಲ. ಇದರಿಂದಾಗಿ ದೇಶ ಪ್ರೇಮಕ್ಕಿಂತ ಹಣವೇ ಮುಖ್ಯ ಎಂದು ಅರಿತ ಪಾಕಿಸ್ತಾನ ಐಸಿಸಿಯ ಮಾತಿಗೆ ಮಣಿದು, ಸಿಗುವ ಪುಡಿಗಾಸಿಗೆ ಕೈಯೊಡ್ಡಿ ಪಂದ್ಯವನ್ನಾಡಲು ಒಪ್ಪಿಕೊಂಡಿದೆ.
ಪಿಸಿಬಿ ಹಾಗೂ ಐಸಿಸಿ ನಡುವೆ ಸುಮಾರು 5 ಗಂಟೆಗಳ ಕಾಲ ಚರ್ಚೆ ನಡೆದಿದೆ. ಪಾಕಿಸ್ತಾನ ಒಪ್ಪದೇ ಇರುತ್ತಿದ್ದರೆ ಬರುವ ಆದಾಯದ ಬದಲು ದಂಡ ತೆರಬೇಕಾಗುತ್ತದೆ. ಇದರಿಂದ ಆತಂಕಗೊಂಡ ಪಾಕಿಸ್ತಾನ ಆಡಲು ಸಜ್ಜಾಗಿದೆ. ಸೋಲುವುದು ಹೇಗೂ ಇದೆ, ಹಣ ಅದರ ಜೊತೆಯಲ್ಲಿ ಹಣ ಕಳೆದುಕೊಳ್ಳುದೇಕೆ ಎಂದು ಪಿಸಿಬಿ ದಾರಿಗೆ ಬಂತು. ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ಹೊರಗುಳಿದಿದೆ. ಅದರ ಬದಲಿಗೆ ಸ್ಕಾಟ್ಲೆಂಡ್ ಆಡುತ್ತಿದೆ.

