Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸೂರ್ಯವಂಶಿ ಕ್ರೀಸಿನಲ್ಲಿದ್ದಿದ್ದು 126 ನಿಮಿಷ, ಗಳಿಸಿದ ರನ್‌ 175!!!

ಹರಾರೆ: ವೈಭವ್‌ ಸೂರ್ಯವಂಶಿ ಸಿಡಿಸಿದ 175 ರನ್‌ಗಳ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ 100 ರನ್‌ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಆರನೇ ಬಾರಿಗೆ 19 ವರ್ಷ ವಯೋಮಿತಿಯ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಂಡಿದೆ. Vaibhav Suryavanshi’s Record-Breaking Century Powers India to Sixth Title, Beat England by 100 Runs

ಸೂರ್ಯವಂಶಿ 126 ನಿಮಿಷಗಳ ಕಾಲ ಕ್ರೀಸಿನಲ್ಲಿ ನಿಂತು 175 ರನ್ ಗಳಿಸಿರುವುದು ವಿಶೇಷ.  16 ಬಾರಿ U19 ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ಭಾರತ 10 ಬಾರಿ ಫೈನಲ್‌ ತಲುಪಿ ಆರನೇ ಬಾರಿ ಪ್ರಶಸ್ತಿ ಗೆದ್ದಿದೆ. ಸೂರ್ಯವಂಶಿ ಸಿಡಿಸಿದ 175 ರನ್‌ ಫೈನಲ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. 80 ಎಸೆತಗಳನ್ನು ಎದುರಿಸಿದ ಸೂರ್ಹವಂಶಿ 15 ಸಿಕ್ಸರ್‌ ಹಾಗೂ 15 ಬೌಂಡರಿ ಸಹಿತ ದಾಖಲೆಗಳ ಪುಡಿಗಟ್ಟಿದರು. ಅತಿ ಹೆಚ್ಚು ಸಿಕ್ಸರ್‌ ಗಳಿಕೆಯಲ್ಲಿ ತನ್ನದೇ ದಾಖಲೆ ಮುರಿದರೆ, ಅತಿ ಹೆಚ್ಚು ಬೌಂಡರಿ ಗಳಿಕೆಯಲ್ಲೂ ತನ್ನದೇ ದಾಖಲೆ ಮುರಿದರು. ಅತಿ ಹೆಚ್ಚು ರನ್‌ ಗಳಿಕೆಯೂ ಸೂರ್ಯವಂಶಿಯ ಹೆಸರಲ್ಲಿ ದಾಖಲಾಯಿತು. ಟೂರ್ನಿಯ ಶ್ರೇಷ್ಠ ಆಟಗಾರ ಹಾಗೂ ಫೈನಲ್‌ ಪಂದ್ಯದ ಪಂದ್ಯಶ್ರೆ಼ಷ್ಠ ಗೌರವವೂ ಸೂರ್ಯವಂಶಿಯ ಪಾಲಾಯಿತು. ಭಾರತ 50 ಓವರ್‌ಗಳಲ್ಲಿ 411 ರನ್‌ಗಳ ಎವರೆಸ್ಟ್‌ ನಿರ್ಮಿಸಿತು. ಇಂಗ್ಲೆಂಡ್‌ 40.2 ಓವರ್‌ಗಳಲ್ಲಿ 311 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಚಾಂಪಿಯನ್‌ ತಂಡವನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಸ್ಪಿನ್‌ ಮಾಂತ್ರಿಕ ಕನ್ನಡಿಗ ಸುನಿಲ್‌ ಜೋಷಿ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲೇಬೇಕು.


administrator