ವಿಶ್ವ ಅಗ್ನಿಶಾಮಕ ಕ್ರೀಡಾಕೂಟಕ್ಕೆ ಉಡುಪಿಯ ಅಶ್ವಿನ್ ಸನಿಲ್
ಉಡುಪಿ: ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಅಗ್ನಿ ಶಾಮಕ ಕ್ರೀಡಾಕೂಟದಲ್ಲಿ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ಅಶ್ವಿನ್ ಸನಿಲ್ ಅವರು ಎರಡು ಚಿನ್ನದ ಪದಕ ಗೆದ್ದು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. Udupi Fire Station Athlete Ashwin Sanil selected of World Fire Games will be held in Saudi Arabia 2026.
ಈಗಾಗಲೇ ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚಿರುವ ಅಶ್ವಿನ್ ಸನಿಲ್, ಬುಧವಾರ 100 ಮತ್ತು 200 ಮೀ. ಓಟಗಳಲ್ಲಿ ಅಗ್ರ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದರು. 40+ ಸ್ಪರ್ಧಿಯಾಗಿರುವ ಸನಿಲ್ 30* ವಿಭಾಗದಲ್ಲೂ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ವಿಶ್ವ ಅಗ್ನಿಶಾಮಕ ದಳದ ಕ್ರೀಡಾಕೂಟ ಸೌದಿ ಅರೇಬಿಯಾದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು ಸನಿಲ್ ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

