ಬ್ರಹ್ಮಾವರ ಕ್ರಿಕೆಟ್: ಸೆಮಿ ಫೈನಲ್, ಫೈನಲ್ ಪೊಲೀಸ್ ಠಾಣೆಯಲ್ಲಿ!
ಲೆಹ್: ಕ್ರಿಕೆಟ್ ಟೂರ್ನಿಯ ಪಂದ್ಯಗಳು ಕ್ರಿಕೆಟ್ ಅಂಗಣದಲ್ಲಿ ನಡೆಯುವುದು ಸಾಮಾನ್ಯ. ಆದರೆ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟ್ರೋಫಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಫಲಿತಾಂಶ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತೀರ್ಮಾನವಾಗುತ್ತಿರುವುದು ವಿಶೇಷ. The results of the semi-final and final matches of the Brahmavar HMC United Trophy, which have been the subject of much controversy, are being decided at the Brahmavar Police Station.
ಶಕೀಲ್ ಹೊನ್ನಾಳ ಮುಂದಾಳತ್ವದಲ್ಲಿ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಮೂರನೇ ಸೆಮಿಫೈನಲ್ ಪಂದ್ಯದ ಫಲಿತಾಂಶ ಸಾಕಷ್ಟು ವಿವಾದಕ್ಕೆ ಗುರಿಯಾಗಿ ಟೂರ್ನಿಯೇ ರದ್ದಾಗಿತ್ತು. ಇದರಿಂದಾಗಿ ಬಹುಮಾನವನ್ನು ಹಂಚಿ ನೀಡುವುದಾಗಿ ಶಕೀಲ್ ವಾಟ್ಸಪ್‌ನಲ್ಲಿ ಸಂದೇಶ ರವಾನಿಸಿದ್ದರು. ಆದರೆ ಹಣ ಕಂಚಿಕೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದ ಕಾರಣ 40 ಲಕ್ಷ ರೂ,ಗಳ ಬಹುಮಾನವಾದ ಕಾರಣ ವಿಷಯ ಬ್ರಹ್ಮಾವರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಮೂರು ದಿನಗಳ ಕಾಲ ನಡೆದ ಈ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆಲ್ಲುವ ತಂಡ 25,00,000 ರೂ ಬಹುಮಾನ ಗೆಲ್ಲಬೇಕಾಗಿತ್ತು. ಅದೇ ರೀತಿ ಎರಡನೇ ಸ್ಥಾನ ಗೆಲ್ಲುವ ತಂಡಕ್ಕೆ 15,00,000 ರೂ ಬಹಮಾನವಿದ್ದಿತ್ತು. ಆದರೆ ಕ್ವಾರ್ಟರ್‌ಫೈನಲ್ ಪಂದ್ಯದ ಕೊನೆಯ ಪಂದ್ಯದ ವೇಳೆ ಉಂಟಾದ ಗೊಂದಲದಿಂದಾಗಿ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗುವ ಸಾಧ್ಯತೆ ಇದೆ. ಸೋಮವಾರ ರಾತ್ರಿಯವರೆಗೂ ಅಂತಿಮ ತೀರ್ಮಾನ ಪ್ರಕಟವಾಗಿಲ್ಲ.

