ಮುಂಬೈ ಮ್ಯಾರಥಾನ್ ಗೆದ್ದ Ortho Surgeon ಡಾ. ಕಾರ್ತಿಕ್ ಕರ್ಕೇರ
ಮುಂಬೈ: ನಾಸಿಕ್ನಲ್ಲಿರುವ ಡಾ. ವಸಂತ್ರಾವ್ ಪವಾರ್ ಮೆಡಿಕಲ್ ಕಾಲೇಜಿನ ಆರ್ಥೋಪೆಡಿಕ್ ಸರ್ಜನ್, ಮಂಗಳೂರು ಮೂಲದ ಡಾ. ಕಾರ್ತಿಕ್ ಕರ್ಕೇರ ಅವರು ಮುಂಬೈಯಲ್ಲಿ ಸೋಮವಾರ ನಡೆದ ಟಾಟಾ ಮುಂಬೈ ಮ್ಯಾರಥಾನ್ನ ಭಾರತೀಯ ಎಲೈಟ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. Mumbai Marathon 2026: Dr Kartik Karkera wins finishes at top in the Indian Elite category
ವೈದ್ಯ ವೃತ್ತಿ ಹಾಗೂ ಅಥ್ಲೆಟಿಕ್ಸ್ ಎರಡನ್ನೂ ಸರಿದೂಗಿಸುತ್ತಿರುವ ಡಾ ಕಾರ್ತಿಕ್ ಅವರು ಹೆಚ್ಚಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ ನಿತ್ಯವೂ ಅಭ್ಯಾಸ ನಡೆಸುತ್ತಿದ್ದರು. ಮ್ಯಾರಥಾನ್ ಅಭ್ಯಾಸ ಮಾಡುವುದಕ್ಕಾಗಿಯೇ ಮುಂಬೈ ತೊರೆದು ಸಾಸಿಕ್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರಿಗೆ ತಂದೆ ಜಯರಾಜ್ ಕರ್ಕೇರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ ಕಾರಣ ದೇಶದ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಮ್ಯಾರಥಾನ್ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಳೆದ ವರ್ಷ ಡೆಲ್ಲಿ ಮ್ಯಾರಥಾನ್ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಡಾ ಕಾರ್ತಿಕ್ ಕರ್ಕೇರ, 2 ಗಂಟೆ 19 ನಿಮಿಷ ಹಾಗೂ 55 ಸೆಕೆಂಡುಗಳಲ್ಲಿ ಗುರಿ ತಲುಪಿ ವೃತ್ತಿಪರ ಓಟಗಾರರಿಗೆ ಅಚ್ಚರಿ ಮೂಡಿಸಿದರು.

ಮುಂಬಯಿಯ ಬೊರಿವಲಿಯವರಾದ ಡಾ. ಕರ್ಕೇರ ವೈದ್ಯ ವೃತ್ತಿಯ ಜೊತೆಯಲ್ಲೇ ಮ್ಯಾರಥಾನ್ ಅಭ್ಯಾಸ ನಡೆಸುತ್ತಿರುವುದು ವಿಶೇಷ, ಬೆಳಿಗ್ಗೆ 4:30ಕ್ಕೆ ಓಟ ಆರಂಭಿಸುವ ಕರ್ಕೇರ ಅವರು ಲಾಂಗ್ ಡಿಸ್ಟೆನ್ಸ್ ರನ್ನಿಂಗ್ನಲ್ಲಿ ಮಹಾರಾಷ್ಟ್ರದ ಪರ ಹಲವಾರು ಪದಕಗಳನ್ನು ಗೆದ್ದಿದ್ದಾರೆ.
1500 ಮೀ ಓಟವನ್ನು 3 ನಿಮಿಷ 43.69 ಸೆಕೆಂಡುಗಳಲ್ಲಿ ಗುರಿ ತಲುಪಿರುವ ಡಾ. ಕಾರ್ತಿಕ್ ಮಹಾರಾಷ್ಟ್ರ ರಾಜ್ಯದ ಪರ ನೂತನ ದಾಖಲೆ ಬರೆದಿದ್ದಾರೆ.

