ವಿಜಯ ಹಜಾರೆ: ಕಳೆದ ವರ್ಷದ ಫೈನಲ್ ಈ ವರ್ಷದ ಸೆಮಿಫೈನಲ್
ಬೆಂಗಳೂರು: ಗುರುವಾರ ಬೆಂಗಳೂರಿನಲ್ಲಿರುವ ಬಿಸಿಸಿಐ ಇಒಇ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ಗಳಾದ ಕರ್ನಾಟಕ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ. ಇದರೊಂದಿಗೆ ಕಳೆದ ವರ್ಷವ ವಿಜಯ ಹಜಾಆರೆ ಟ್ರೋಫಿಯ ಫೈನಲ್ ಪಂದ್ಯ ಪುನರಾವರ್ತನೆಗೊಳ್ಳಲಿದೆ. Karnataka v Vidarbha Vijaya Hazare Trophy Semifinal is repeat of 2025 Final.
ಕಳೆದ ಋತುವಿನಲ್ಲಿ ವಿದರ್ಭ ತಂಡದ ಪರ ಆಡಿದ್ದ ಕರುಣ್ ನಾಯರ್ ಅವರು ಈ ಬಾರಿ ಕರ್ನಾಟಕ ತಂಡದಲ್ಲಿ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕರುಣ್ ನಾಯರ್ ಅವರ ಹೆಸರಲ್ಲಿದ್ದರೆ, ಈ ಬಾರಿ ದೇವದತ್ತ ಪಡಿಕ್ಕಲ್ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಕೆಯ ದಾಖಲೆ ಹೊಂದಿದ್ದಾರೆ.
ವಿದರ್ಭ ಕಳೆದ ಬಾರಿಯ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಕರ್ನಾಟಕ ಆರನೇ ಬಾರಿಗೆ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಗೌರವಕ್ಕೆ ಪಾತ್ರವಾಗುವ ಉತ್ಸಾಹದಲ್ಲಿದೆ.
ಎಲ್ಲ ಪಂದ್ಯಗಳಲ್ಲೂ ಆಡಿದ್ದ ವಿದರ್ಭ ನಾಯಕ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡಿರಲಿಲ್ಲ, ಕೇವಲ 27 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು, ದೇವದತ್ತ ಪಡಿಕ್ಕಲ್ ಅಂದು ಫೈನಲ್ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದ್ದರು. ಇದುವರೆಗೂ ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿ 721 ರನ್ ಗಳಿಸಿರುವ ದೇವದತ್ತ ಪಡಿಕ್ಕಲ್ ನಾಳೆಯ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭದ ವಿರುದ್ಧ ಸ್ಥಿರ ಪ್ರದರ್ಶನ ಮುಂದುವರಿಸಿದರೆ ಕರ್ನಾಟಕಕ್ಕೆ ಶ್ರೀರಕ್ಷೆ. ವಿದರ್ಭದ ಅಮನ್ ಮೊಖಾಡೆ 643 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

