Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಗ್ರೇಸ್ ಹ್ಯಾರಿಸ್‌, ಗ್ರೇಟ್‌ ಮಂದಾನ ಸೂಪರ್‌ ಆರ್‌ಸಿಬಿ

ನವಿ ಮುಂಬೈ: ಮೊದಲ ಪಂದ್ಯದಲ್ಲಿ ಪ್ರಯಾಸದ ಜಯ ಕಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ 9 ವಿಕೆಟ್‌ ಸುಲಭ ಜಯ ಗಳಿಸಿದೆ. Royal Challengers Bengaluru registered second win in WPL.

ಮೊದಲು ಪೀಲ್ಡಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ವನಿತೆಯರು ಯುಪಿ ವಾರಿಯರ್ಸ್‌ ತಂಡವನ್ನು 143 ರನ್‌ಗೆ ಕಟ್ಟಿ ಹಾಕಿತು. ದೀಪ್ತಿ ಶರ್ಮಾ 45* ಮತ್ತು ದೇಂಡ್ರಾ ಡಾಟಿನ್‌ 40* ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಆರ್‌ಸಿಬಿ ಪರ ನಾಡೈನ್‌ ಡಿ ಕ್ಲಾರ್ಕ್‌ ಹಾಗೂ ಶ್ರೇಯಾಂಕ್‌ ಪಾಟೀಲ್‌ ತಲಾ 2 ವಿಕೆಟ್‌ ಗಳಿಸಿದರು.

144 ರನ್‌ ಸಾಧಾರಣ ಮೊತ್ತವನ್ನು ಬೆಂಬತ್ತಿದ ಆರ್‌ಸಿಬಿ ಪರ ಗ್ರೇಸ್‌ ಹ್ಯಾರಿಸ್‌ 40 ಎಸೆತಗಳನ್ನೆದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 85 ರನ್‌ ಸಿಡಿಸಿ ಜಯದ ಹಾದಿ ಸುಗಮಗೊಳಿಸಿದರು. ನಾಯಕಿ ಸ್ಮೃತಿ ಮಂದಾನ ಅಜೇಯ 47 ರನ್‌ ಗಳಿಸುವುದರೊಂದಿಗೆ ತಂಡ ಇನ್ನೂ 47 ಎಸೆತ ಬಾಕಿ ಇರುವಾಗಲೇ ಜಯದ ಗುರಿ ತಲುಪಿತು.


administrator