ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ
ವಡೋದರಾ: ವಿರಾಟ್ ಕೊಹ್ಲಿ ಅವರ ಆಕರ್ಷಕ 93 ರನ್ ಹಾಗೂ ನಾಯಕ ಶುಭ್ಮನ್ ಗಿಲ್ ಅವರ ಜವಾಬ್ದಾರಿಯುತ 56 ರನ್ ನೆರವಿನಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಜಯ ಗಳಿಸಿದೆ. 1st ODI: Kohli, Gill guide India to tense 4-wicket win against New Zealand in Vadodara
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,017 ರನ್ ತಲುಪಿದಾಗ ಅತಿ ಹೆಚ್ಚು ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ (28,016) ಅವರನ್ನು ಹಿಂದಿಕ್ಕಿದರು. ಸಚಿನ್ ತೆಂಡೂಲ್ಕರ್ 34,357 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡ ಭಾರತ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 300/8 ಕಟ್ಟಿ ಹಾಕಿತು. ಭಾರತ ಇನ್ನೂ 1 ಓವರ್ ಬಾಕಿ ಇರುವಾಗಲೇ 6 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಡಿವೋನ್ ಕಾನ್ವೆ (56), ಹೆನ್ರಿ ನಿಕೊಲಾಸ್ (62) ಹಾಗೂ ಡೆರಿಲ್ ಮಿಚೆಲ್ (84) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
301 ರನ್ ಜಯದ ಗುರಿ ಹೊತ್ತ ಭಾರತ ಆರಂಭ ಉತ್ತಮವಾಗಿರಲಿಲ್ಲ 26 ರನ್ ಗಳಿಸುವಷ್ಟರಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ಶುಭ್ಮನ್ ಗಿಲ್ (56), ವಿರಾಟ್ ಕೊಹ್ಲಿ (93) ಹಾಗೂ ಶ್ರೇಯಸ್ ಅಯ್ಯರ್ (49) ಜರಯ ಹಾದಿಯನ್ನು ಸುಗಮಗೊಳಿಸಿದರು.

