WPL ಮುಂಬೈಗೆ ಶಾಕ್, ಆರ್ಸಿಬಿಗೆ ಅಚ್ಚರಿಯ ಜಯ ತಂದ ಕ್ಲಾರ್ಕ್
ನವಮುಂಬೈ: ನಡೈನ್ ಡಿ ಕ್ಲಾರ್ಕ್ ಅವರ ಆಲ್ರೌಂಡ್ ಆಟದ ನೆವಿನಿಂದ ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ರೋಚಕ 3 ವಿಕೆಟ್ ಜಯ ಗಳಿಸಿದೆ, Nadine de Klerk”s stunning all-round show helps RCB beat MI by 3 wickets in WPL opener
155 ರನ್ ಜಯದ ಗುರಿ ಹೊತ್ತ ಆರ್ಸಿಬಿ 19 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ 6 ಎಸೆತಗಳಲ್ಲಿ 18 ರನ್ ಅಗತ್ಯವಿದ್ದಿತ್ತು. ಮೊದಲ ಎರಡು ಎಸೆಗಳಲ್ಲಿ ರನ್ ದಾಖಲಾಗಲಿಲ್ಲ. ಮುಂಬಯಿ ಗೆಲ್ಲುವುದು ಖಚಿತ ಎಂಬುದು ನೋಡುಗರ ನಿಲುವು. ಆದರೆ ಕ್ಲಾರ್ಕ್ ನಂತರದ ನಾಲ್ಕು ಎಸೆಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಮುಂಬೈ ಇಂಡಿಯನ್ಸ್ಗೆ ಮೊದಲ ಪಂದ್ಯದಲ್ಲೇ ಆಘಾತ ನೀಡಿದರು. 44 ಎಸೆತಗಳನ್ನು ಎದುರಿಸಿದ ಕ್ಲಾರ್ಕ್ ಅವರು ಅಜೇಯ 63 ರನ್ ಸಿಡಿಸಿ ಜಯದ ರೂವಾರಿ ಎನಿಸಿದರು. ಬೌಲಿಂಗ್ನಲ್ಲೂ 26 ರನ್ಗೆ 4 ವಿಕೆಟ್ ಗಳಿಸಿದ ಕ್ಲಾರ್ಕ್ ಮುಂಬಯಿ ತಂಡವನ್ನು 154 ರನ್ಗೆ ಕಡಿವಾಣ ಹಾಕಿದ್ದರು.

