Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಯುಡಿಸಿಎ ಟ್ಯಾಲೆಂಟ್‌ ಹಂಟ್‌ ಟೂರ್ನಿ: ಫಾರಿಕ್‌ ಶತಕ

ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ ಟೂರ್ನಿಯ ಪಂದ್ಯದಲ್ಲಿ ಯುಡಿಸಿಎ ಹಳದಿ ತಂಡದ ಪರ ಆಡುತ್ತಿದ್ದ ಫಾರಿಕ್‌ 165 ರನ್‌ ಗಳಿಸಿ ಅದ್ಭತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. Fariq century UDCA Blue and UDCA Yellow match end in Draw.

ಮೊದಲು ಬ್ಯಾಟಿಂಗ್‌ ಮಾಡಿದ ಯುಡಿಸಿಎ ಬ್ಲೂ 225 ರನ್‌ ಗಳಿಸಿತ್ತು.  ತಂಡದ ಪರ ಧ್ಯಾನ್‌ (72), ಓಂಕಾರ್‌ (30), ಸೈಫ್‌ (51), ಯುಡಿಸಿಎ ಹಳದಿ ಪರ ಬೌಲಿಂಗ್‌ನಲ್ಲಿ ಮಾಝಿನ್‌ 1/40, ಫಾರಿಕ್‌ 4/38, ನವಾಫ್‌ 5/36 ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಇದಕ್ಕೆ ಉತ್ತರವಾಗಿ ಯುಡಿಸಿಎ ಹಳದಿ ತಂಡ 342 ರನ್‌ ಗಳಿಸಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಫಾರಿಕ್‌ 175 ಎಸೆತಗಳನ್ನೆದುರಿಸಿ 165 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು.  ಮಾಝಿನ್‌ 72 ರನ್‌ ಗಳಿಸಿದರು. ಯುಡಿಸಿಎ ಬ್ಲೂ ಪರ ಬೌಲಿಂಗ್‌ನಲ್ಲಿ ಗ್ಲೆನ್‌ 1/61, ಆದಿತ್ಯ 3/51, ಧ್ಯಾನ್‌ 3/49, ಹಾಗೂ ವಿಷ್ಣು 1/26 ಯಶಸ್ಸು ಕಂಡರು.

ಯುಡಿಸಿಎ ಬ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿತು. ಓಂಕಾರ್‌ 28, ಧ್ಯಾನ್‌ 24, ಆದಿತ್ಯ 48, ಕಾರ್ತಿಕ್‌ 25 ರನ್‌ ಗಳಿಸಿದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಉಡುಪಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್‌ ನೆರವೇರಿಸಿದರು. ಈ ಸಂದರ್ಭಧಲ್ಲಿ ಅವರು ಆಟಗಾರರಿಗೆ ಅಗತ್ಯವಿರುವ ಫಿಟ್ನೆಸ್‌, ಟೆಸ್ಟ್‌ ಕ್ರಿಕೆಟ್‌ನ ಮಹತ್ವ, ಆಟಗಾರರಿಗೆ ಅಗತ್ಯವಿರುವ ಶಿಸ್ತು ಇವುಗಳ ಬಗ್ಗೆ ತಿಳಿ ಹೇಳಿದರು. ಯುಡಿಸಿಎ ಕಾರ್ಯದರ್ಶಿ ಡಾ. ರೆನ್‌ ಟ್ರೆವರ್‌ ಡಯಾಸ್‌ ಅವರು ಸ್ವಾಗತಿಸಿದರು. ಕೋಚ್‌ ಸದಾನಂದ ಶಿರ್ವ ಹಾಜರಿದ್ದರು. ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಪ್ರಮುಖರು ರಾಜರಿದ್ದರು. ನಿಟ್ಟೆ ವಿಶ್ವನಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಾಮಸುಂದರ್‌ ಹಾಜರಿದ್ದು, ಟೂರ್ನಿಗೆ ಸಂಪೂರ್ಣ ಬೆಂಬಲ ನೀಡಿದರು


administrator