Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೆಎಸ್‌ಸಿಎ ಕ್ರಿಕೆಟ್‌ ಸಲಹಾ ಸಮಿತಿಗೆ ಕುಂಬ್ಳೆ, ಶ್ರೀನಾಥ್‌, ಜೋಶಿ

ಬೆಂಗಳೂರು: ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್‌‌ ಸಂಸ್ಥೆಯ ನೂತನ ಆಡಳಿತ ಸಮಿತಿಯು ರಾಜ್ಯದಲ್ಲಿ ಕ್ರಿಕೆಟ್‌ ಅಭಿವೃದ್ಧಿಗಾಗಿ ಹಾಗೂ ಕೆಎಸ್‌ಸಿಎ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನೂತನ ಸಲಹಾ ಸಮಿತಿಯನ್ನು ರೂಪಿಸಿದ್ದು, ಅದರಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್‌ ಕುಂಬ್ಳೆ, ಭಾರತ ಮಾಜಿ ವೇಗದ ಬೌಲರ್‌, ಐಸಿಸಿ ಮ್ಯಾಚ್‌ ರೆಫರಿ ಜಾವಗಲ್‌ ಶ್ರೀನಾಥ್‌, ಸ್ಪಿನ್‌ ಮಾಂತ್ರಿಕ ಸುನಿಲ್‌ ಜೋಶಿ, ಭಾರತದ ಮಾಜಿ ಆಟಗಾರ ವಿಜಯ್‌ ಭಾರದ್ವಾಜ್‌ ಹಾಗೂ ಜಯಶ್ರೀ ದೊರೆಸ್ವಾಮಿ ಗೌರವಾನ್ವಿತ ಸದಸ್ಯರಾಗಿರುತ್ತಾರೆ. The Karnataka State Cricket Association (KSCA), under the newly elected Managing Committee led by legendary former international cricketer Venkatesh Prasad as President, has constituted the Cricket Advisory Committee (CAC).

ಆಯ್ಕೆ ಸಮಿತಿಗೆ ಅಮಿತ್‌ ವರ್ಮಾ ಅಧ್ಯಕ್ಷ

ಕ್ರಿಕೆಟ್‌ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಪ್ರಸಕ್ತ ಋತುವಿನ ಆಯ್ಕೆ ಸಮಿತಿಯಲ್ಲಿ ಹೊಸ ಶಿಫಾರಸುಗಳನ್ನು ಮಾಡಿದ್ದು, ಈ ಶಿಫಾಸರುಗಳನ್ನು ಆಡಳಿತ ಮಂಡಳಿಯು ಅನುಮೋದನೆ ಮಾಡಿದೆ. ಮಾಜಿ ಕ್ರಿಕೆಟಿಗ ಅಮಿತ್‌ ವರ್ಮಾ ಅವರು ಹಿರಿಯ ಮತ್ತು 23 ವರ್ಷ ವಯೋಮಿತಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯಲ್ಲಿ ಎಸ್‌. ಪ್ರಕಾಶ್‌, ತೇಜಪಾಲ್‌ ಕೊಠಾರಿ ಹಾಗೂ ಸುನಿಲ್‌ ರಾಜು ಸೇರಿದ್ದಾರೆ.

ಕಿರಿಯರ ವಿಭಾಗ (19, 16, 14 ವಯೋಮಿತಿ)

ಕಿರಿಯರ ಆಯ್ಕೆ ಸಮಿತಿಯಲ್ಲಿ ಜಿ.ಕೆ. ಅನಿಲ್‌ ಕುಮಾರ್‌, ಸಿ. ರಾಘವೇಂದ್ರ, ಜಿ.ಎನ್.‌ ಉಮೇಶ್‌ ಹಾಗೂ ಡಿ.ಎಸ್‌. ಅನಂತ್ ಸೇರಿದ್ದಾರೆ.

ನೂತನ ತರಬೇತುದಾರರಲ್ಲಿ ಗಣೇಶ್‌ ಸತೀಶ್‌ ಹಾಗೂ ದೀಪರ್‌ ಚೌಗಲೆ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮಹಿಳಾ ಆಯ್ಕೆ ಸಮಿತಿಯನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದ್ದು, ಈ ಕುರಿತು ಅಗತ್ಯವಾದ ತೀರ್ಮಾವನ್ನು ಕೂಡಲೇ ಕೈಗೊಲ್ಳಲಾಗುವುದು ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ನಡೆದ ಆಡಳಿತ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ ಖಜಾಂಚಿ ವಿನಯ್‌ ಮೃತ್ಯುಂಜಯ ಅವರನ್ನು ಕೆಎಸ್‌ಸಿಎ ಅಧಿಕೃತ ವಕ್ತಾರ ಹಾಗೂ ಸಾರ್ವಜನಿಕ ಹಾಗೂ ಸದಸ್ಯರ ಸಂಪರ್ಕ ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.


administrator