ಮೆಸ್ಸಿಯ ಎಡಗಾಲಿನ ವಿಮೆ ಮೊತ್ತ 8162 ಕೋಟಿ ರೂ!
ಬೆಂಗಳೂರು: ಭಾರತಕ್ಕೆ ಆಗಮಿಸಿದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಎಲ್ಲಿಯೂ ಪ್ರದರ್ಶನ ಪಂದ್ಯವನ್ನಾಡಿರಲಿಲ್ಲ. ಕಾರಣ ಅವರ ಕಾಲಿಗೆ ಇರುವ ವಿಮೆ. ಅವರ ಎಡಗಾಲಿನ ವಿಮಾ ಮೊತ್ತ ಅವರ ಗಳಿಕೆಯ ಮೊತ್ತಕ್ಕಿಂತಲೂ ಜಾಸ್ತಿ ಇದೆ. ಅಂದರ ಬರೋಬ್ಬರಿ 8160 ಕೋಟಿ ರೂ. How Lionel Messi’s left foot insurance worth Rs 8162,38,35,000 bars him from playing exhibition match in India
2025ರ ವರದಿಯ ಪ್ರಕಾರ ಮೆಸ್ಸಿಯ ಸಂಪತ್ತಿನ ಮೌಲ್ಯ 7500 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಫುಟ್ಬಾಲ್ ಜಗತ್ತಿನಲ್ಲಿ ಮೆಸ್ಸಿ ಇದುವರೆಗೂ 1200ಕ್ಕೂ ಹೆಚ್ಚು ಪಂದ್ಯಗಳನ್ನಾಡಿ 889 ಗೋಲುಗಳನ್ನು ಗಳಿಸಿರುತ್ತಾರೆ. ಮೆಸ್ಸಿ ಎಡಗಾಲಿನಲ್ಲಿ ಚೆಂಡನ್ನು ಗೋಲ್ ಬಾಕ್ಸಿಗೆ ಗುರಿ ಇಟ್ಟು ತುಳಿದರೆಂದರೆ ಅದು ಅಚ್ಚರಿ ಎಂಬಂತೆ ಗೋಲ್ ಬಾಕ್ಸ್ ಸೇರುತ್ತದೆ. ಈ ಕಾರಣಕ್ಕಾಗಿ ಅವರ ಎಡ ಗಾಲಿಗೆ ಜಗತ್ತಿಲ್ಲೇ ಅತಿ ಹೆಚ್ಚು ಮೌಲ್ಯದ ವಿಮೆಯನ್ನು ಹೊಂದಿದೆ.
ಹಾಗಂತ ಮೆಸ್ಸಿ ಹೋದಲ್ಲಿ ಬಂದಲ್ಲಿ ಆಡಿ ಕಾಲಿಗೆ ಹಾನಿಯಾದರೆ ವಿಮೆ ಸಿಗುವುದಿಲ್ಲ. ಅದಕ್ಕಾಗಿ ಅವರು ಪ್ರದರ್ಶನ ಪಂದ್ಯಗಳಲ್ಲಿ ಹೆಚ್ಚು ಕಾಲ ಆಡುವುದಿಲ್ಲ. ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಮಾನ್ಯತೆ ನೀಡಿದ ಪಂದ್ಯಗಳಲ್ಲಿ ಹಾಲಿಗೆ ಹಾನಿಯಾದರೆ ಮಾತ್ರ ವಿಮಾ ಸೌಲಭ್ಯ ಅನ್ವಯವಾಗುತ್ತದೆ.

