ಚಂದರಗಿ ಕ್ರೀಡಾ ಶಾಲೆಗೆ ಕೀರ್ತಿ ತಂದ ಹೊನ್ನಪ್ಪ ಧರ್ಮಟ್ಟಿ
ಚಂದರಗಿ: ಇತ್ತೀಚೆಗೆ ಒಡಿಶಾದಲ್ಲಿ ನಡೆದ 30ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Honnappa Chidananda Dharmatti, a student of Chandaragi Sports School in Belgaum, won a silver medal at the 30th National Road Cycling Championship held recently in Odisha, bringing glory to the school and the state of Karnataka.
16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 40 ಕಿಲೋ ಮೀಟರ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕುಮಾರ್ ಹೊನ್ನಪ್ಪ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಚಂದರಗಿ ಕ್ರೀಡಾ ಶಾಲೆಯ ಕೋಚ್ ಭೀಮಶಿ ವಿಜಯನಗರ ಅವರಲ್ಲಿ ತರಬೇತಿ ಪಡೆಯುತ್ತಿರುವ ಹೊನ್ನಪ್ಪ ಚಿದಾನಂದ ಧರ್ಮಟ್ಟಿ, ಇದುವರೆಗೂ ಐದು ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎರಡು ಬಾರಿ ಟ್ರ್ಯಾಕ್ ಸೈಕ್ಲಿಂಗ್ ಹಾಗೂ ಮೂರು ಬಾರಿ ರೋಡ್ ಸೈಕ್ಲಿಂಗ್ನಲ್ಲಿ ಕರ್ನಾವನ್ನು ಪ್ರತಿನಿಧಿಸಿರುತ್ತಾರೆ. 2023ರಲ್ಲೂ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದಿರುತ್ತಾರೆ.

ಬಾಗಲಕೋಟೆ ಜಿಲ್ಲೆಯ ಮಾರಾಪೂರ ಗ್ರಾಮದ ಚಿದಾನಂದ ಮತ್ತು ಶಾಂತಾ ಧರ್ಮಟ್ಟಿ ದಂಪತಿಯ ಪುತ್ರ ಹೊನ್ನಪ್ಪ, ಆರಂಭದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನಂತರ ಸೈಕ್ಲಿಂಗ್ ಬಗ್ಗೆ ಆಸಕ್ತಿ ಹೊಂದಿ ಯಶಸ್ಸು ಸಾಧಿಸಿದರು. ಹೊನ್ನಪ್ಪ ಅವರ ಸಾಧನೆಗೆ SPOCO ಸಂಸ್ಥೆಯ ಸ್ಥಾಪಕರಾದ ಎಸ್.ಎಂ. ಕಲೂತಿ, ಅಧ್ಯಕ್ಷರಾದ ಮೃಣಾಲಿನಿ ಪಟ್ಟಣ್ ಹಾಗೂ ಶಿಕ್ಷಕ ವರ್ಗ ಮತ್ತು ಆಡಳಿತ ವರ್ಗ ಅಭಿನಂದನೆ ಸಲ್ಲಿಸಿದೆ

