ಡಿ. 10ರಂದು ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವ
Sportsmail: ಪ್ರತಿ ವರ್ಷದಂತೆ ನಡೆಯುತ್ತಿರುವ ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಇದೇ ತಿಂಗಳ 10 ಬುಧವಾರದಂದು ಬೆಳಿಗ್ಗೆ 11:42 ರಿಂದ ಸಂಜೆ 5 ಗಂಟೆಯವರೆಗೆ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ತಗ್ಗರ್ಸೆ ಹೆಗ್ಡೆ ಕುಟುಂಬದವರು ಹಾಗೂ ತಗ್ಗರ್ಸೆ ಗ್ರಾಮಸ್ಥರ ಪ್ರಕಟಣೆ ತಿಳಿಸಿದೆ. Historically famous Thaggarse traditional Kambala will be held on Dec 10 Wednesday at Thaggarse Byndoor.
ಈ ಆನುವಂಶಿಕ ಕಂಬಳೋತ್ಸವವು ಸರಕಾರ ಮತ್ತು ಕಂಬಳ ಸಮಿತಿ ನಿಯಮಗಳಿಗನುಸಾರವಾಗಿ ಸ್ಥಳೀಯ ಕಂಬಳ ಗದ್ದೆಯ ಸಾಂಪ್ರದಾಯಿಕ ಕಂಬಳ ನಿಯಮಗಳಿಗೆ ಅನುಸಾರವಾಗಿ ನಡೆಯಲಿದೆ ಎಂದು ತಗ್ಗರ್ಸೆಯ ಕಂಠದ ಮನೆ ಟಿ. ನಾರಾಯಣ ಹೆಗ್ಡೆ ಅವರು ತಿಳಿಸಿರುತ್ತಾರೆ.
ಇದು ಸಾಂಪ್ರದಾಯಿಕ ಕಂಬಳವಾದರೂ ಇಲ್ಲಿ ಗೆದ್ದವರಿಗೆ ಬಹುಮಾನ ಇದ್ದೇ ಇರುತ್ತದೆ. ತಗ್ಗರ್ಸೆಯ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ ತಗ್ಗರ್ಸೆ ಇವರು ನಗದು ಬಹುಮಾನ ನೀಡಲಿದ್ದಾರೆ.
ಬಹುಮಾನಗಳ ವಿವರ:
ಹಲಗೆ ವಿಭಾಗ: ಪ್ರಥಮ ಬಹುಮಾನ 12,006 ಹಾಗೂ ಫಲಕ, ದ್ವಿತೀಯ ಬಹಮಾನ: 10,008 ಹಾಗೂ ಫಲಕ.
ಹಗ್ಗ ವಿಭಾಗ ಹಿರಿಯ: ಪ್ರಥಮ ಬಹುಮಾನ 12,006 ಹಾಗೂ ಫಲಕ, ದ್ವಿತೀಯ ಬಹಮಾನ: 10,008 ಹಾಗೂ ಫಲಕ.
ಹಗ್ಗ ವಿಭಾಗ ಕಿರಿಯ (ಎ): ಪ್ರಥಮ ಬಹುಮಾನ 8,001 ಹಾಗೂ ಫಲಕ, ದ್ವಿತೀಯ ಬಹಮಾನ: 7,002 ಹಾಗೂ ಫಲಕ.
ಹಗ್ಗ ವಿಭಾಗ ಕಿರಿಯ (ಬಿ): ಪ್ರಥಮ ಬಹುಮಾನ 8,001 ಹಾಗೂ ಫಲಕ, ದ್ವಿತೀಯ ಬಹಮಾನ: 7,002 ಹಾಗೂ ಫಲಕ.
ಕೋಣಗಳನ್ನು ಓಡಿಸುವವರಿಗೂ ಸ್ಪರ್ಧೆ ನಡೆಯಲಿದ್ದು, ಅವರಿಗೂ ನಗದು ಬಹಮಾನವಿರುತ್ತದೆ.
ಹಲಗೆ ವಿಭಾಗ ಹಿರಿಯ ಆಟಗಾರರಲ್ಲಿ ಅಗ್ರ ಸ್ಥಾನ ಪಡೆದವರಿಗೆ, 1,008 ರೂ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ರೂ. 504.
ಹಗ್ಗ ವಿಭಾಗ ಹಿರಿಯ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸುವ ಓಟಗಾರರಿಗೆ ,008 ರೂ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ರೂ. 504.
ಹಗ್ಗ ವಿಭಾಗ ಕಿರಿಯ (ಎ) ವಿಭಾಗದಲ್ಲಿ ಮೊದಲ ಸ್ಥಾನ ಗಳಿಸುವ ಓಟಗಾರರಿಗೆ ,008 ರೂ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ರೂ. 504.
ಉತ್ತಮ ವೇಷಭೂಷಣಗಳೊಂದಿಗೆ ಅತಿ ಹೆಚ್ಚು ಕೋಣಗಳನ್ನು ತಂದವರಿಗೆ ರೂ. 1007 ಬಹುಮಾನವಿರುತ್ತದೆ.

