Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರು ಬುಲ್ಸ್‌ಗೆ ಸುಲಭ ತುತ್ತಾದ ಗುಜರಾತ್‌

ನವದೆಹಲಿ: ಅಲಿರೇಜಾ ಮಿರ್ಜಾಯಿನ್‌ ಮತ್ತು ಆಕಾಶ್‌ ಶಿಂದೆ ಅವರ ಸೂಪರ್‌ ಟೆನ್‌ ಸಾಹಸಗಳಿಂದ ಮಿಂಚಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 18ನೇ ಪಂದ್ಯದಲ್ಲಿಗುಜರಾತ್‌ ಜಯಂಟ್ಸ್‌ ವಿರುದ್ಧ 28 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಬುಲ್ಸ್‌, ಲೀಗ್‌ ಹಂತದಲ್ಲಿಆಡಿದ 18 ಪಂದ್ಯಗಳಲ್ಲಿ11 ಗೆಲುವು ಮತ್ತು 7 ಸೋಲುಗಳೊಂದಿಗೆ 22 ಅಂಕಗಳನ್ನು ಕಲೆಹಾಕಿತು. The Bengaluru Bulls were at their dominant best as they crushed the Gujarat Giants with a massive 54–26 victory at the Thyagaraj Indoor Stadium in Delhi on Thursday

ತ್ಯಾಗರಾಜ್‌ ಒಳಾಂಗಣ ಕ್ರೀಡಾಗಣದಲ್ಲಿಗುರುವಾರ ನಡೆದ ಮೊದಲ ಪಂದ್ಯದಲ್ಲಿಅತ್ಯಮೋಘ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ 54-26 ಅಂಕಗಳಿಂದ ಗುಜರಾತ್‌ ಗೆ ಸೋಲುಣಿಸಿತು. ಇದರೊಂದಿಗೆ  ಕೋಚ್‌ ಬಿ.ಸಿ. ರಮೇಶ್‌ ಗರಿಡಿಯಲ್ಲಿಪಳಗಿರುವ ಬುಲ್ಸ್‌, ಇದೇ 25ರಿಂದ ಆರಂಭವಾಗಲಿರುವ ಪ್ಲೇಆಫ್‌ ಸುತ್ತಿಗೆ ಭರ್ಜರಿಯಾಗಿ ಅಣಿಯಾಗಿರುವುದನ್ನು ಬಿಂಬಿಸಿತು. ಅತ್ತ 18 ಪಂದ್ಯಗಳಿಂದ ಕೇವಲ 12 ಅಂಕಗಳನ್ನು ಕಲೆಹಾಕಲಷ್ಟೇ ಶಕ್ತವಾದ ಗುಜರಾತ್‌ ಜಯಂಟ್ಸ್‌, 12 ತಂಡಗಳ ಅಂಕಪಟ್ಟಿಯಲ್ಲಿ10ನೇ ಸ್ಥಾನಕ್ಕೆ ಸೀಮಿತಗೊಂಡಿತು.

ಬೆಂಗಳೂರು ಬುಲ್ಸ್‌ ತಂಡದ ಪರ ಅಲಿರೇಜಾ (10 ಅಂಕ) ಮತ್ತು ಆಕಾಶ್‌ ಶಿಂದೆ (11 ಅಂಕ) ಸೂಪರ್‌ ಟೆನ್‌ ಸಾಹಸ ಮಾಡಿದರು. ಇವರಲ್ಲದೆ, ಡಿಫೆಂಡರ್‌ ಸಂಜಯ್‌, ಆಶೀಶ್‌ ಮತ್ತು ದೀಪಕ್‌ ಶಂಕರ್‌ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅತ್ತ ಗುಜರಾತ್‌ ತಂಡದ ಪರ ಶ್ರೀಧರ್‌ ಕದಂ(7 ಅಂಕ) ಮತ್ತು ಹಿಮಾಂಶು (5 ಅಂಕ) ಹೊರತುಪಡಿಸಿ ಉಳಿಸಿದವರು ನಿರಾಸೆ ಮಡಿಸಿದರು.

ಮೊದಲ ಅವಧಿಯ ಅಂತ್ಯಕ್ಕೆ ಮೂರು ಬಾರಿ ಗುಜರಾತ್‌ ತಂಡವನ್ನು ಕಟ್ಟಿಹಾಕಿದ ಬೆಂಗಳೂರು ಬುಲ್ಸ್‌, 10 ಟ್ಯಾಕಲ್‌ ಮತ್ತು 19 ರೇಡಿಂಗ್‌ ಅಂಕಗಳೊಂದಿಗೆ 36-7ರಲ್ಲಿಮೇಲುಗೈ ಸಾಧಿಸುವ ಮೂಲಕ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಧುಮಿಕಿದ ಬುಲ್ಸ್‌ ಆಟಗಾರರು ,20 ನಿಮಿಷಗಳ ಆಟದಲ್ಲಿಒಮ್ಮೆಯೂ ಚೇತರಿಸಿಕೊಳ್ಳಲು ಎದುರಾಳಿ ತಂಡಕ್ಕೆ ಅವಕಾಶವನ್ನು ನೀಡಲಿಲ್ಲ.

ದ್ವಿತೀಯಾರ್ಧದಲ್ಲಿಹಿಂದಿನ ಲಯವನ್ನು ಮುಂದುವರಿಸುವ ಇರಾದೆಯೊಂದಿಗೆ ಬುಲ್ಸ್‌ ಆಟಗಾರರು ಕಣಕ್ಕಿಳಿದರು. ಆದರೆ ಜಯಂಟ್ಸ್‌ ತಂಡ ಪ್ರತಿರೋಧ ಒಡ್ಡುವ ಸಾಹಸ ಮಾಡಿತು. ಆದಾಗ್ಯೂ, 11 ರೇಡಿಂಗ್‌, 3 ಟ್ಯಾಕಲ್‌  ಹಾಗೂ 2 ಆಲೌಟ್‌ ಪಾಯಿಂಟ್ಸ್‌ ಗಳಿಸಿದ ಬುಲ್ಸ್‌, 18 ಅಂಕಗಳನ್ನು ಕಲೆಹಾಕಿತು. ಅತ್ತ ಜಯಂಟ್ಸ್‌ ಸಹ 3 ಬೋನಸ್‌, 2 ಆಲೌಟ್‌, 4 ಹಾಗೂ 10 ರೇಡಿಂಗ್‌ ಅಂಕಗಳೊಂದಿಗೆ ಒಟ್ಟು 19 ಅಂಕಗಳನ್ನು ಗಳಿಸಿ ಹೋರಾಟ ಸಂಘಟಿಸಿತು. ಆದರೆ ಮೊದಲ ಅವಧಿಯ ಹಿನ್ನಡೆ ತಂಡವನ್ನು ಬಾಧಿಸಿತು.


administrator