Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಅಥ್ಲೆಟಿಕ್ಸ್‌: ಕರ್ನಾಟಕದ ಕೃಷಿಕ್‌ಗೆ ಚಿನ್ನ!

ವಾರಂಗಲ್‌: ಇಲ್ಲಿನ ಹನುಮಕೊಂಡದಲ್ಲಿರುವ ಜವಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆದ 5ನೇ ಅಖಿಲ ಭಾರತ 23 ವರ್ಷ ವಯೋಮಿತಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಕೃಷಿಕ್‌ ಎಂ. 110 ಮೀ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದದಾರೆ. Krishik Manjunath from Karnataka won the gold medal in Hurdles at Indian Open U23 Athletic Championship Telangana.

13.84 ಸೆಕೆಂಡುಗಳಲ್ಲಿ ಗುರಿ ತಲುಪಿದ ಕೃಷಿಕ್‌ ಅಗ್ರ ಸ್ಥಾನಿಯಾದರೆ, ಕೇರಳದ ರಾಹಿಲ್‌ , ರಿಲೆಯನ್ಸ್‌ನ ರತೀಶ್‌ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.

ಇದುವರೆಗೂ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಕೃಷಿಕ್ ರಾಂಚಿಯಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಕೃಷಿಕ್‌ ಅವರ ಸಹೋದರ ತನಿಷ್‌ ಕೂಡ ಅಥ್ಲೆಟಿಕ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೃಷಿಕ್‌ ಅವರ ತಂದೆ ತುಮಕೂರಿನ ಮಂಜುನಾಥ್‌ ಉತ್ತಮ ಕ್ರೀಡಾಪಟುವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಮನೆಯವರು ಅವಕಾಶ ನೀಡಲಿಲ್ಲ. ಇದರಿಂದಾಗಿ ಉದ್ಯೋಗಕ್ಕೆ ಸೇರಿದರು. ತನ್ನ ಮಕ್ಕಳು ತನ್ನಂತೆ ಕ್ರೀಡೆಯಿಂದ ವಂಚಿತರಾಗಬಾರದು ಎಂದು ಉನ್ನತ ಹುದ್ದೆಯನ್ನು ತೊರೆದು ತಮಕೂರಿನಲ್ಲಿ ಕೃಷಿ ಆರಂಭಿಸಿ ಮಕ್ಕಳ ಕ್ರೀಡಾ ಬದುಕಿಕಾಗಿ ಶ್ರಮಿಸತೊಡಗಿದರು.


administrator