Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಾಗಡಿ ಕ್ರಿಕೆಟ್‌ ಅಕಾಡೆಮಿಗೆ ಅರ್ಜುನ ಟ್ರೋಫಿ

ಬೆಂಗಳೂರು: ಕಳೆದ ಎಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಅರ್ಜುನನ ಹೆಸರಿನಲ್ಲಿ ನಡೆದ ಅರ್ಜುನ ಕ್ರಿಕೆಟ್‌ ಟೂರ್ನಿಯನ್ನು ಬೆಂಗಳೂರಿನ ಮಾಗಡಿ ಕ್ರಿಕೆಟ್‌ ಅಕಾಡೆಮಿ ಗೆದ್ದಕೊಂಡಿದೆ.

ಕ್ರಿಕೆಟ್‌ ಜಗತ್ತಿನಲ್ಲಿ ಆನೆಯ ಹೆಸರಿನಲ್ಲಿ ನಡೆಯುತ್ತಿರುವ ವಿಶೇಷ ಕ್ರಿಕೆಟ್‌ ಟೂರ್ನಿ ಇದಾಗಿದೆ. Magadi Cricket Academy beat Play Smart Cricket Academy by 2 runs and won the AVR Arjuna cup.

ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಾಗಡಿ ಕ್ರಿಕೆಟ್‌ ಅಕಾಡೆಮಿ ತಂಡ ಪ್ಲೇ ಸ್ಮಾರ್ಟ್‌ ವಿರುದ್ಧ 2 ರನ್‌ ಅಂತರದಲ್ಲಿ ಜಯ ಗಳಿಸಿ ಪ್ರತಿಷ್ಠಿತ ಅರ್ಜುನ ಟ್ರೋಫಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಮಾಗಡಿ ತಂಡ, 29.1 ಓವರ್‌ಗಳಲ್ಲಿ 201 ರನ್‌ಗೆ ಆಲೌಟ್‌ ಆಗಿತ್ತು. ತಂಡದ ಪರ ಅಯಾತ್‌ ರಹೀಂ ಖಾನ್‌ 61 ರನ್‌ ಗಳಿಸಿ ಸವಾಲಿನ ಮೊತ್ತಕ್ಕೆ ನೆರವಾದರು. 31 ಎಸೆತಗಳನ್ನು ಎದುರಿಸಿದ ವಿಕೆಟ್‌ ಕೀಪರ್‌ & ಬ್ಯಾಟ್ಸ್ಮನ್‌ ರಹೀಂ ಖಾನ್‌ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸೇರಿತ್ತು. ಆರಂಭಿಕ ಆಟಗಾರ ಜಗನ್‌ ಟಿಪಿ (33), ಶಿಶಿರ್‌ ಅರವಿಂದ್‌ (47), ಸಚಿತ್‌ ಗಲಟಗಿ (30) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಪ್ಲೇ ಸ್ಮಾರ್ಟ್‌ ಕ್ರಿಕೆಟ್‌ ತಂಡದ ಪರ ಅಥರ್ವ್‌ ಕರಡಿ ಹಾಗೂ ಜೈಪ್ರೀತ್‌ ತಲಾ 3 ವಿಕೆಟ್‌ ಗಳಿಸಿದರು.

202 ರನ್‌ ಜಯದ ಗುರಿ ಹೊತ್ತ ಪ್ಲೇ ಸ್ಮಾರ್ಟ್‌ ಕ್ರಿಕೆಟ್‌ ತಂಡದ ಪರ ಗಗನ್‌ ಯಶ್‌ಪಾಲ್‌ (65) ಹಾಗೂ ಅಥರ್ವ್‌ ಕರಡಿ (50) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೂ ಮಾಗಡಿಯ ಶಿಸ್ತಿನ ಬೌಲಿಂಗ್‌ ದಾಳಿಯ ಮುಂದೆ ಜಯ ದಕ್ಕಲಿಲ್ಲ.

ಮಾಗಡಿ ಪರ ಆಕರ್ಶ್‌ ಎಂ. 34 ರನ್‌ಗೆ 3 ವಿಕೆಟ್‌ ಗಳಿಸಿದರೆ, ಯಶ್ವಿನ್‌ ರಮೇಶ್‌ 23 ರನ್‌ಗೆ 3 ವಿಕೆಟ್‌ ಗಳಿಸಿದರು. ಆಕರ್ಷ್‌ ಎಂ. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ವಿಜೇತ ತಂಡಕ್ಕೆ ಮಾಗಡಿ ಕ್ರಿಕೆಟ್‌ ಅಕಾಡೆಮಿಯ ಪ್ರಧಾನ ಕೋಚ್‌ ಕೆ. ಮಂಜುನಾಥ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.


administrator