ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಎಎಫ್ಸಿ ಕಾರ್ಯಕ್ರಮ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಗೆ ಜೀವ ತುಂಬುತ್ತಿರುವ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯು ಮೇ 27ರಂದು ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ ತಳಮಟ್ಟದ ಫುಟ್ಬಾಲ್ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ನಡೆಸಿತು. Victoria Football Academy Manipal organized AFC Grassroots Program 2025 with child safety awareness program At City Arena on 27th May. ಇಲ್ಲಿನ ಸಿಟಿ ಅರೇನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಫುಟ್ಬಾಲ್ ಆಟಗಾರರ ಹೆತ್ತವರು ಅತಿಥಿಗಳಾಗಿ ಮತ್ತು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು. ಮಣಿಪಾಲದಲ್ಲಿ ಮೊದಲ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಫುಟ್ಬಾಲ್ ಆಟಗಾರರು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಗ್ರಾಮೀಣ ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಯುವಕರು ಫುಟ್ಬಾಲ್ ಆಟದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ ಎಂದು ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯ ಕ್ಲೈವ್ ಮಸ್ಕರೆನ್ಹಾಸ್ ಹಾಗೂ ಮಿಲನ ಅಭಿಪ್ರಾಯಪಟ್ಟಿದ್ದಾರೆ.