ಲಖನೌಗೆ ಜಯ ತಂದ ನಿಕೊಲಾಸ್ ಪೂರನ್
ಹೈದರಾಬಾದ್: ಮೊದಲ ಪಂದ್ಯದಲ್ಲಿ ಗೆದ್ದ ಅಮಲಿನಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ನೈಜ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಯಿತು. ನಿಕೊಲಾಸ್ ಪೂರನ್ ಅಬ್ಬರದ ಆಟ ಪ್ರದರ್ಶಿಸುವುದರೊಂದಿಗೆ ಎಲ್‌ಎಸ್‌ಜಿ 5 ವಿಕೆಟ್ ಜಯ ಗಳಿಸಿತು. Lucknow Super Giants get their first win of the season by defeating Sunrisers Hyderabad by 5 wickets.
ಎಲ್‌ಎಸ್‌ಜಿ ಟಾಸ್ ಗೆದ್ದು ಫೀಲ್ಟಿಂಗ್ ಆಯ್ದುಕೊಂಡಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದ ಇಶಾನ್ ಕಿಶನ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು ತಂಡಕ್ಕೆ ದೊಡ್ಡ ಹೊಡೆತ. ಟ್ರಾವಿಸ್ ಹೆಡ್ 47 ರನ್ ಗಳಿಸಿ ಸಾಧಾರನ ಮೊತ್ತಕ್ಕೆ ನೆರವಾದರು. ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
191 ರನ್ ಜಯದ ಗುರಿ ಹೊತ್ತ ಎಲ್‌ಎಸ್‌ಜಿ ಪೂರನ್ ಅವರ ಅಬ್ಬರ 70 ರನ್ ಹಾಗೂ ಮಿಚೆಲ್ ಮಾರ್ಷ್ ಅವರ ಅಮೂಲ್ಯ 52 ರನ್ ನೆರವಿನಿಂದ ಇನ್ನೂ 23 ಎಸೆತ ಬಾಕಿ ಇರುವಾಗಲೇ 193 ರನ್ ಗಳಿಸಿ ಜಯ ಸಾಧಿಸಿತು. ಪೂರನ್ ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರ 26 ಎಸೆತಗಳನ್ನೆದುರಿಸಿ 6 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ನಿಕೊಲಾಸ್ ಪೂರನ್ ಆರೆಂಜ್ ಕ್ಯಾಪ್ ಜೊತೆಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಶಾರ್ದೂಲ್ ಠಾಕೂರ್ 4 ವಿಕೆಟ್ ಸಾಧನೆ ಮಾಡಿ ಪರ್ಪಲ್ ಕ್ಯಾಪ್ ಗಳಿಸಿದರು.