NESCAFE ಹಾಕಿ: ಮೂರ್ನಾಡು ಬ್ಲೇಜ್ ತಂಡಕ್ಕೆ ಚಾಂಪಿಯನ್ ಪಟ್ಟ
ಚೆಪ್ಪುಡೀರ ಕಾರ್ಯಪ್ಪ, ಗೋಣಿಕೊಪ್ಪಲ: ನೆಸ್ಲೆ ಇಂಡಿಯ ಲಿಮಿಟೆಡ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್‌ಕೆಫೆ ಕೊಡಗು ಹಾಕಿ ಕಪ್‌ನಲ್ಲಿ ಮೂರ್ನಾಡು ಬ್ಲೇಜ್ ಹಾಕಿ ಕ್ಲಬ್ ಗೆದ್ದುಕೊಂಡಿದ್ದು, ಬೊಟ್ಟಿಯತ್ತ್ನಾಡ್ ಕುಂದ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. Moornadu Blaze Hockey Club Champion of the NESCAFE Kodagu Cup 2025
ಮೂರ್ನಾಡು ಬ್ಲೇಜ್ ಹಾಕಿ ಕ್ಲಬ್ ತಂಡವು ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಮಣಿಸಿ ಕಪ್ ಗೆದ್ದುಕೊಂಡಿತು. ಬ್ಲೇಜ್ ತಂಡದ ಚೆಶ್ವಿನ್, ಬೊಟ್ಟಿಯತ್ತ್ನಾಡ್ ಪರವಾಗಿ ದೀಪಕ್ ರಾವತ್ ಗೋಲು ಹೊಡೆದರು. 1-1 ಸಮಬಲದಿಂದಾಗಿ ಶೂಟೌಟ್‌ನಲ್ಲಿ ಬ್ಲೇಜ್ 3-2 ಗೋಲುಗಳಿಂದ ಗೆದ್ದು ಬೀಗಿತು. ಮೂರ್ನಾಡು ಬ್ಲೇಜ್ ತಂಡದ ಸೋಮಣ್ಣ ಬೆಸ್ಟ್ ಗೋಲ್ ಕೀಪರ್, ಬೊಟ್ಟಿಯತ್ತ್ನಾಡ್ ಕುಂದ ತಂಡದ ಗ್ಯಾನ್ ಬೆಸ್ಟ್ ಡಿಫೆಂಡರ್, ಕೋಣಕಟ್ಟೆ ಇಲೆವೆನ್ ತಂಡದ ರಾಮ ಬೆಸ್ಟ್ ಮಿಡ್ ಫೀಲ್ಡರ್, ಬೊಟ್ಟಿಯತ್ತ್ನಾಡ್ ಕುಂದ ತಂಡದ ಹರ್ಮನ್ ದೀಪ್ ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿ ಪಡೆದರು.