Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಕ್ರೀಡಾಕೂಟ: ಈಜಿನಲ್ಲಿ ಕರ್ನಾಟಕ ದಾಖಲೆ

ಉತ್ತರಾಖಂಡ್‌: ಇಲ್ಲಿನ ಹಲ್‌ದ್ವಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜಿನಲ್ಲಿ ಕರ್ನಾಟಕದ ಈಜುಗಾರರು ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. National Games Dhinidhi desinghu created Best Indian timings in 200mtr free style.

ವನಿತೆಯರ 200 ಮೀ, ಫ್ರೀಸ್ಟೈಲ್‌ನಲ್ಲಿ ರಾಜ್ಯದ ಧೀನಿಧಿ ದೇಸಿಂಘು 2 ನಿಮಿಷ 03.24 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2022ರಲ್ಲಿ ರಾಜ್‌ಕೋಟ್‌ನಲ್ಲಿ ಕರ್ನಾಟಕದವರೇ ಆದ ಹರ್ಷಿಕ ರಾಮಚಂದ್ರ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಈ ವಿಭಾಗದಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರದ ಈಜುಗಾರರು ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.

ಪುರುಷರ 200 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಕರ್ನಾಟಕದ ಪಾಲಾಯಿತು. ಒಲಿಂಪಿಯನ್‌ ಶ್ರೀಹರಿ ನಟರಾಜ್‌ 1 ನಿಮಿಷ 50.57 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, 1 ನಿಮಿಷ 52.42 ಸೆಕೆಂಡುಗಳಲ್ಲಿ ಗುರಿ ತಲುಪಿದ ಕರ್ನಾಟಕದವರೇ ಆದ ಅನೀಶ್‌ ಎಸ್‌ ಗೌಡ ಬೆಳ್ಳಿ ಗೆದ್ದರು. ಕೇರಳದ ಸಜ್ಜನ್‌ ಪ್ರಕಾಶ್‌ ಕಂಚಿಗೆ ತೃಪ್ತಿಪಟ್ಟರು.

ವನಿತೆಯರ 100 ಮೀ ಬಟರ್‌ಫ್ಲೈನಲ್ಲಿ ಕರ್ನಾಟಕದ ಧೀನಿಧಿ ದೇಸಿಂಘು 1 ನಿಮಿಷ 03.62 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಕರ್ನಾಟಕದ ಇನ್ನೋರ್ವ ಸ್ಪರ್ಧಿ ನೈಶಾ ಶೆಟ್ಟಿ, 1 ನಿಮಿಷ 04.81 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು.

ಪುರುಷರ 4×100 ಮೀ ಫ್ರೀಸ್ಟೈಲ್‌ ರಿಲೇಯಲ್ಲಿ ಕರ್ನಾಟಕದ ಈಜುಗಾರರು ಚಿನ್ನ ಗೆದ್ದರು. ಶ್ರೀಹರಿ ನಟರಾಜ್‌, ಅನೀಶ್‌ ಎಸ್‌ ಗೌಡ, ಚಿಂತನ್‌ ಎಸ್‌ ಶೆಟ್ಟಿ, ಹಾಗೂ ಆಕಾಶ್‌ ಮಣಿ ಅವರನ್ನೊಳಗೊಂಡ ತಂಡ 3 ನಿಮಿಷ 26.26 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದರು.

ವನಿತೆಯರ 4×100 ಫ್ರೀ ಸ್ಟೈಲ್‌ ರಿಲೇಯಲ್ಲಿ ಕರ್ನಾಟಕ ತಂಡ ಚಿನ್ನ ಗೆದ್ದಿದೆ. ನೀನಾ ವೆಂಕಟೇಶ್‌, ಶಾಲಿನಿ ಆರ್‌ ಧೀಕ್ಷಿತ್‌, ಲತೀಶಾ ಮಂದನ ಹಾಗೂ ಧೀನಿಧಿ ದೇಸಿಂಘು ಅವರನ್ನೊಳಗೊಂಡ ತಂಡ 4 ನಿಮಿಷ 01.58 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿತು.

ಮೊದಲ ದಿನಲ್ಲಿ ಕರ್ನಾಟಕ ಒಟ್ಟು 5 ಚಿನ್ನ 2 ಬೆಳ್ಳಿ ಪದಕಗಳೊಂದಿಗೆ ಈಜಿನ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಇದಿದೆ.


administrator