Saturday, July 20, 2024

ಸಾಧನೆಗೆ ವಯಸ್ಸಿನ ಮಿತಿಯಿಲ್ಲ… ಇರಾನಿ ಕಪ್‌ನಲ್ಲಿ ವಾಸಿಂ ದ್ವಿಶತಕದ ವಂಡರ್!

ನಾಗ್ಪುರ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಎಷ್ಟೋ ಕ್ರೀಡಾಪಟುಗಳು ಈ ಮಾತನ್ನು ನಿಜವಾಗಿಸಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮುಂಬೈನ 40 ವರ್ಷದ ಬ್ಯಾಟ್ಸ್‌ಮನ್ ವಾಸಿಂ ಜಾಫರ್.
ಹೌದು. ವಾಸಿಂ ಜಾಫರ್‌ಗೆ ವಯಸ್ಸಾದರೂ ಅವರ ಆಟಕ್ಕೆ ದಣಿವೆಂಬುದೇ ಇಲ್ಲ. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶೇಷ ಭಾರತ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಜಾಫರ್, ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ರಣಜಿ ಚಾಂಪಿಯನ್ ವಿದರ್ಭ ಪರ ಆಡುತ್ತಿರುವ ವಾಸಿಂ, ಪಂದ್ಯದ 2ನೇ ದಿನವಾದ ಗುರುವಾರ ದಾಖಲೆಯ ದ್ವಿಶತಕ ಸಿಡಿಸಿದರು.
PC: BCCI
ಭಾರತದ ಪ್ರಥಮದರ್ಜೆ ಕ್ರಿಕೆಟ್ ಇತಿಹಾಸದ ಪಂದ್ಯವೊಂದರಲ್ಲಿ 40ನೇ ವರ್ಷದಲ್ಲಿ 250 ರನ್ ಗಳಿಸಿದ ಬಾರಿಸಿದ ಮೊಟ್ಟ ಮೊದಲ ಆಟಗಾರನೆಂಬ ದಾಖಲೆಗೆ ವಾಸಿಂ ಜಾಫರ್ ಪಾತ್ರರಾಗಿದ್ದಾರೆ. ಅಲ್ಲದೆ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಜಾಫರ್ 18 ಸಾವಿರ ರನ್‌ಗಳನ್ನೂ ಪೂರ್ತಿಗೊಳಿಸಿದ್ದಾರೆ.
ಸುದೀರ್ಘ ಇನ್ನಿಂಗ್ಸ್‌ನಲ್ಲಿ 425 ಎಸೆತಗಳನ್ನೆದುರಿಸಿದ ಜಾಫರ್ 34 ಬೌಂಡರಿಗಳು ಮತ್ತು 1 ಸಿಕ್ಸರ್ ನೆರವಿನೊಂದಿಗೆ ಅಜೇಯ 285 ರನ್ ಗಳಿಸಿದ್ದು, ತ್ರಿಶತಕದತ್ತ ದಾಪುಗಾಲು ಹಾಕಿದ್ದಾರೆ. 267 ರನ್ ಗಳಿಸಿದ್ದ ಸಂದರ್ಭದಲ್ಲಿ ಇರಾನಿ ಕಪ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಜಾಫರ್ ತಮ್ಮ ಹೆಸರಿಗೆ ಬರೆಸಿಕೊಂಡರು. ಈ ಹಿಂದಿನ ದಾಖಲೆ ತಮಿಳುನಾಡಿನ ಮುರಳಿ ವಿಜಯ್ ಹೆಸರಲ್ಲಿತ್ತುಘಿ. ಶೇಷ ಭಾರತ ಪರ ವಿಜಯ್ 2013ರಲ್ಲಿ ರಾಜಸ್ಥಾನ ವಿರುದ್ಧ 266 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಈಗ ಜಾಫರ್ ಧೂಳೀಪಟ ಮಾಡಿದ್ದಾರೆ.
ಜಾಫರ್ ಅವರ ಆಕರ್ಷಕ ದ್ವಿಶತಕದ ನೆರವಿನಿಂದ ವಿದರ್ಭ ತಂಡ 2ನೇ ದಿನದಾಟದ ಅಂತ್ಯಕ್ಕೆ 180 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 598 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.
40ರ ಹರೆಯದಲ್ಲೂ ದಣಿವಿಲ್ಲದ ದಾಂಡಿಗನ ದ್ವಿಶತಕದ ಆಟಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಸಹಿತ ಹಲವಾರು ಮಾಜಿ ಕ್ರಿಕೆಟಿಗರು ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

@SGanguly99
Well done Wasim Jaffer ..old man still  super @bcci

@harbhajan_singh
Congratulations Wasim Jaffer 200 not out and 18000 first class runs and still going strong.. he should have played for bit longer for Team India. #perfectplayer #Topplayer. Vidrabha vs rest of india #iranitrophy @BCCIdomestic @BCCI

@MohammadKaif
Wasim Jaffer is an inspiration. At 40, has scored a brilliant double hundred against a Rest of India attack also compromising Ashwin.

@hemangkbadani
So so happy to see #wasimjaffer still ruling the roost at a young age of 40. Amazed to see his hunger and passion. Guys like him make it worth watching and playing this sport. Respect.#iranitrophy @StarSportsIndia #awesomeness.

Related Articles