Thursday, September 12, 2024

ವಿಶ್ವಕಪ್ ಹಾಕಿ: ಭಾರತ ವನಿತೆಯರಿಗೆ ಸೋಲು

ವಿಶ್ವಕಪ್ 
  ಹಾಕಿ: ಭಾರತ ವನಿತೆಯರಿಗೆ ಸೋಲು

ಲಂಡನ್ :  ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಚಾಂಪಿಯನ್‌ಶಿಪ್ ನಲ್ಲಿ ಉತ್ತಮ ಪ್ರದರ್ಶನದ ನಡುವೆಯೂ ಭಾರತ ತಂಡ ಐರ್ಲೆಂಡ್ ವಿರುದ್ಧ ಶೂಟೌಟ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಪರಾಭವಗೊಂಡು ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿದೆ.
ನಿಗಧಿತ ಅವಧಿಯಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ ಫಲಿತಾಂಶವನ್ನು ಶೂಟೌಟ್ ಮೂಲಕ ತೀರ್ಮಾನಿಸಲಾಯಿತು.


ಭಾರತದ ಪರ ರೀನಾ ಖೊಖರ್ ಮಾತ್ರ ಗೋಲು ಗಳಿಸಿದರು. ಐರ್ಲೆಂಡ್ ನ ಗೋಲ್ ಕೀಪರ್ ಆಯೇಶಾ ಮೆಕ್ ಫೆರಾನ್ ಅವರ ತಂಡ ಸೆಮಿಫೈನಲ್ ತಲಪುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ಗೋಲು ಗಳಿಸುವಲ್ಲಿ ವಿಫಲವಾದರೂ ನಾಲ್ಕೂ ಕ್ವಾರ್ಟರ್ ಗಳಲ್ಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಶೂಟೌಟ್ ನಲ್ಲಿ ಅದೃಷ್ಟ ಕೈಗೂಡಲಿಲ್ಲ.

Related Articles