Wednesday, July 24, 2024

ಲೆಫ್ಟಿನೆಂಟ್ ಕರ್ನಲ್ ಧೋನಿ ಈಗ ಪದ್ಮಭೂಷಣ ಧೋನಿ… ಪ್ರಶಸ್ತಿ ಸ್ವೀಕರಿಸುವಾಗ್ಲೂ ಮಾಹಿ ಶಿಸ್ತಿನ ಸಿಪಾಯಿ

ಹೊಸದಿಲ್ಲಿ: ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟ ಮಹಾನ್ ನಾಯಕ ಮಹೇಂದ್ರ ಸಿಂಗ್ ಧೋನಿ, ಈಗ ಪದ್ಮಭೂಷಣ ಎಂ.ಎಸ್ ಧೋನಿ. ಹೌದು. ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ, ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಭಾರತ ತಂಡದ ಮಾಜಿ ನಾಯಕನಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
PC: Twitter
ಧೋನಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ದೃಶ್ಯವನ್ನು ನೋಡಿದ್ರೆ ಮೈಯೆಲ್ಲಾ ಒಂದು ಕ್ಷಣ ರೋಮಾಂಚನವಾಗುವುದು ಗ್ಯಾರಂಟಿ. ಯಾಕಂದ್ರೆ ಧೋನಿ ಈಗ ಬರೀ ಧೋನಿ ಅಲ್ಲ. ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್. ಹೀಗಾಗಿ ಧೋನಿ ಸೇನಾ ಸಮವಸ್ತ್ರ ತೊಟ್ಟು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದರು.
ಪದ್ಮಭೂಷಣ ಪ್ರಶಸ್ತಿಗಾಗಿ ಧೋನಿ ಅವರ ಹೆಸರು ಕರೆದಾಗ, ಮಾರ್ಚ್ ಪಾಸ್ಟ್ ಮಾಡುತ್ತಲೇ ಬಂದ ಧೋನಿ, ರಾಷ್ಟ್ರಪತಿಗಳಿಗೆ ಸಲ್ಯೂಟ್ ಹೊಡೆದು ಪ್ರಶಸ್ತಿ ಸ್ವೀಕರಿಸಿದರು. ಧೋನಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಕ್ಷಣವನ್ನು ಟೀಮ್ ಇಂಡಿಯಾದ ಮಾಜಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ.
PC: Twitter

ಮಾರ್ಚ್ ಪಾಸ್ಟ್, ಸಲ್ಯೂಟ್, ಸರ್ಟಿಫಿಕೇಟ್ ಅನ್ನು ಹಿಡಿದುಕೊಂಡ ರೀತಿ… ಎಲ್ಲವೂ ಅತ್ಯಂತ ಅದ್ಭುತವಾಗಿತ್ತು. ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿನಂದನೆಗಳು.
– ವೀರೇಂದ್ರ ಸೆಹ್ವಾಗ್ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ.

PC: Twitter
ಅಂದ ಹಾಗೆ ಧೋನಿ ಪದ್ಮಭೂಷಣ ಪ್ರಶಸ್ತಿ ಪಡೆಯುವಾಗಲೂ ದಾಖಲೆಯೊಂದನ್ನು ಬರೆದಿದ್ದಾರೆ. ಕ್ರಿಕೆಟ್ ಆಡುತ್ತಿದ್ದಾಗಲೇ ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಭಾರತದ ಮೊಟ್ಟ ಮೊದಲ ಕ್ರಿಕೆಟ್ ತಾರೆ ಎಂಬ ಗೌರವಕ್ಕೆ ಧೋನಿ ಪಾತ್ರರಾಗಿದ್ದಾರೆ.

Related Articles