Thursday, December 12, 2024

ಬೌಲ್ಟ್ ಬಿರುಗಾಳಿಗೆ ಕೊಚ್ಚಿ ಹೋದ ಇಂಗ್ಲೆಂಡ್ 58ಕ್ಕೆ ಆಲೌಟ್!

ಆಕ್ಲೆಂಡ್: ನ್ಯೂಜಿಲೆಂಡ್‌ನ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ ಘಾತಕ ಬೌಲಿಂಗ್ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಇಂಗ್ಲೆಂಡ್ ತಂಡ, ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನಲ್ಲಿ ಗುರುವಾರ ಆರಂಭಗೊಂಡ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೇವಲ 58 ರನ್‌ಗಳಿಗೆ ಆಲೌಟಾಗಿದೆ.

PC: Twitter/BLACKCAPS

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೀಷರನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ವೇಗಿ ಟ್ರೆಂಟ್ ಬೌಲ್ಟ್ ಅವರ ಬಿರುಗಾಳಿ ಬೌಲಿಂಗ್‌ಗೆ ಅಕ್ಷರಶಃ ಕೊಚ್ಚಿ ಹೋಗಿ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 58 ರನ್‌ಗಳಿಗೆ ಸರ್ವಪತನ ಕಂಡಿತ್ತು. 32 ರನ್ನಿತ್ತು 6 ವಿಕೆಟ್ ಉಡಾಯಿಸಿದ ಬೌಲ್ಟ್, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ದುಃಸ್ವಪ್ನವಾಗಿ ಕಾಡಿದರು. ಬೌಲ್ಟ್‌ಗೆ ಹೆಗಲು ಕೊಟ್ಟ ಮತ್ತೊಬ್ಬ ವೇಗಿ ಟಿಮ್ ಸೌಥೀ 25 ರನ್ನಿತ್ತು 4 ವಿಕೆಟ್ ಕಬಳಿಸಿದರು. ಬೌಲ್ಟ್ ಮತ್ತು ಸೌಥೀ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 20.4 ಓವರ್‌ಗಳಲ್ಲಿ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿತು.
9ನೇ ಕ್ರಮಾಂಕದಲ್ಲಿ ವೇಗಿ ಕ್ರೆಗ್ ಒವರ್ಟನ್ 33 ರನ್ ಗಳಿಸದೇಏ ಹೋಗುತ್ತಿದ್ದರೆ ಇಂಗ್ಲೆಂಡ್ 30 ರನ್ ದಾಟುವುದೂ ಸಾಧ್ಯವಾಗುತ್ತಿರಲಿಲ್ಲ. 27 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ಒವರ್ಟನ್ ಸಾಹಸದಿಂದ 50 ರನ್‌ಗಳ ಗಡಿ ದಾಟುವಂತಾಯಿತು.

Related Articles