Thursday, December 12, 2024

ಬಾಲ್ ಟ್ಯಾಂಪರಿಂಗ್ ಗೆ ಮತ್ತೊಂದು ಬಲಿ… ಡೇವಿಡ್ ವಾರ್ನರ್ ಕಣ್ಣೀರಿನ ವಿದಾಯ

ಸಿಡ್ನಿ: ಬಾಲ್ ಟ್ಯಾಂಪರಿಂಗ್ ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಬಲಿ ತೆಗೆದುಕೊಂಡಿದೆ. ಬಾಲ್ ಟ್ಯಾಂಪರಿಂಗ್ ಪ್ರಕರಣದ ಪ್ರಮುಖ ಆರೋಪಿ ಡೇವಿಡ್ ವಾರ್ನರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
PC: Twitter/David Warner
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಕುರಿತಾದ ಹೇಳಿಕೆಯನ್ನು ಓದಿದ ವಾರ್ನರ್, ಕಣ್ಣೀರಿಡುತ್ತಲೇ ವಿದಾಯದ ನಿರ್ಧಾರ ಪ್ರಕಟಿಸಿದರು. ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ವಾರ್ನರ್ ಗದ್ಗದಿತರಾಗಿ ನುಡಿದರು.
ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ನಡೆದ ಬಾಲ್ ಟ್ಯಾಂಪರಿಂಗ್ ಪ್ರಕರಣದ ರೂವಾರಿಯೇ ಡೇವಿಡ್ ವಾರ್ನರ್. ಕ್ಯಾಮರಾನ್ ಬ್ಯಾಂಕ್ಪಾಫ್ಟ್ ಅವರಿಗೆ ಬಾಲ್ ಟ್ಯಾಂಪರಿಂಗ್ ನಡೆಸುವಂತೆ ವಾರ್ನರ್ ಪ್ರೇರೋಪಿಸಿದ್ದರು. ಅದರಂತೆ ಬಾಲ್ ಟ್ಯಾಂಪರಿಂಗ್ ನಡೆಸಿದ್ದ ಬ್ಯಾಂಕ್ರಾಫ್ಟ್ ಕ್ಯಾಮರಾ ಕಣ್ಣಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡಿದ್ದರು. ವಾರ್ನರ್ ಅವರ ಮೇಲೆ ಐಸಿಸಿ ಒಂದು ಪಂದ್ಯದ ನಿಷೇಧ ಶಿಕ್ಷೆ ವಿಧಿಸಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಿತ್ತು.
ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರ ಅಸಮರ್ಥನೀಯವಾಗಿದ್ದು, ನನಗೆ ಅನ್ಯಾಯವಾಗಿದೆ ಎಂದು ವಾರ್ನರ್ ಬೇಸರದಿಂದ ನುಡಿದಿದ್ದಾರೆ.

Related Articles