Sunday, September 8, 2024

ದಿನೇಶ್ ಕಾರ್ತಿಕ್‌ಗೆ ಪತ್ನಿಯಿಂದಲೇ ಆಗಿತ್ತು ಘನಘೋರ ಮೋಸ!

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದು ಕೊಟ್ಟ ದಿನೇಶ್ ಕಾರ್ತಿಕ್ ಇದೀಗ ದೇಶದ ಕ್ರಿಕೆಟ್ ಕಣ್ಮಣಿ. ದೇಶದ ಉದ್ದಗಲಗಳಲ್ಲೂ ಎಲ್ಲರೂ ದಿನೇಶ್ ಕಾರ್ತಿಕ್ ಅವರ ಗುಣಗಾನ ಮಾಡುತ್ತಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಅವರ ಜೀವನದ ಒಂದು ನೋವಿನ ಸಂಗತಿ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಅದು ಕೈಹಿಡಿದ ಪತ್ನಿಯೇ ದಿನೇಶ್‌ಗೆ ಮಾಡಿದ ಘನಘೋರ ಮೋಸದ ಕಥೆ.

PC: Twitter/Ravi Shastri

ಹೌದು. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ದಿನೇಶ್ ಕಾರ್ತಿಕ್‌ಗೆ ಪತ್ನಿಯಿಂದಲೇ ಮೋಸ ಆಗಿತ್ತು. ಕುಟುಂಬ ಸದಸ್ಯರ ಒತ್ತಾಸೆಯಂತೆ ತಂದೆಯ ಗೆಳೆಯನ ಮಗಳು ನಿಖಿತಾಳನ್ನು ವರಿಸಿದ್ದ ದಿನೇಶ್ ಕಾರ್ತಿಕ್ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ತಂದೆಯ ಒತ್ತಾಯಕ್ಕೆ ಮಣಿದು 23ನೇ ವಯಸ್ಸಿನಲ್ಲೇ ಮದುವೆಯಾಗಿದ್ದರೂ, ಸಭ್ಯವ್ಯಕ್ತಿತ್ವದ ದಿನೇಶ್ ಕಾರ್ತಿಕ್, ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು.

ಹೌದು. ದಿನೇಶ್ ಕಾರ್ತಿಕ್ ಮತ್ತು ನಿಖಿತಾ ಕುಟುಂಬದಲ್ಲಿ 2008ರಲ್ಲಿ ಬಿರುಗಾಳಿ ಎದ್ದಿತು. ಆ ಬಿರುಗಾಳಿ ಎಬ್ಬಿಸಿದ್ದು ಬೇರಾರೂ ಅಲ್ಲ. ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್, ದಿನೇಶ್ ಕಾರ್ತಿಕ್ ಅವರ ಬಾಲ್ಯ ಸ್ನೇಹಿತ ಮುರಳಿ ವಿಜಯ್. ಕಾರ್ತಿಕ್ ಮತ್ತು ವಿಜಯ್ 13ರ ವಯೋಮಿತಿಯ ಕ್ರಿಕೆಟ್‌ನಿಂದಲೂ ತಮಿಳುನಾಡು ತಂಡಕ್ಕೆ ಒಟ್ಟೊಟ್ಟಿಗೇ ಆಡುತ್ತಾ ಬಂದವರು. ಹೀಗಾಗಿ ಇಬ್ಬರೂ ಚಿಕ್ಕ ವಯಸ್ಸಿನಿಂದಲೇ ಸ್ನೇಹಿತರು. ಭಾರತ ತಂಡದ ಪರ ಆಡಲು ಆರಂಭಿಸದ ನಂತರವೂ ಇವರಿಬ್ಬರ ಸ್ನೇಹ ಮುಂದುವರಿದಿತ್ತು. ಆದರೆ ಇದೇ ಸ್ನೇಹ ದಿನೇಶ್ ಕಾರ್ತಿಕ್ ಬದುಕಲ್ಲಿ ಬಿರುಗಾಳಿ ಏಳಲು ಕಾರಣವಾಯಿತು.

ದಿನೇಶ್ ಕಾರ್ತಿಕ್ ಮನೆಗೆ ಬರುತ್ತಿದ್ದ ಮುರಳಿ ವಿಜಯ್ ಕಣ್ಣು ಕಾರ್ತಿಕ್ ಪತ್ನಿ ನಿಖಿತಾ ಮೇಲೆ ಬಿತ್ತು. ಬಿನ್ನಾಣಗಿತ್ತಿ ನಿಖಿತಾ ಕೂಡ ಪ್ರೀತಿಯ ಪತಿಯನ್ನು ಬಿಟ್ಟು ಮುರಳಿಯ ಮೋಹದಲ್ಲಿ ಸಿಲುಕಿಬಿಟ್ಟಳು. ಅಲ್ಲಿಂದ ಶುರುವಾಯಿತು ಇಬ್ಬರ ಕಳ್ಳಾಟ.
ದಿನೇಶ್ ಕಾರ್ತಿಕ್ ಮನೆಯಲ್ಲಿಲ್ಲದಿದ್ದಾಗಲೂ ಮುರಳಿ ವಿಜಯ್ ಕಾರ್ತಿಕ್ ಮನೆಗೆ ಬರುವುದಕ್ಕೆ ಆರಂಭಿಸಿದ. ಈ ವಿಷಯವನ್ನು ತಮಿಳುನಾಡಿನ ಕ್ರಿಕೆಟರ್ ಒಬ್ಬ ದಿನೇಶ್ ಕಾರ್ತಿಕ್‌ಗೆ ತಿಳಿಸಿದಾಗಲೂ ಕಾರ್ತಿಕ್ ಇದಾವುದನ್ನೂ ನಂಬಲಿಲ್ಲ. ಏಕೆಂದರೆ ಪತ್ನಿ ಮತ್ತು ಸ್ನೇಹಿತನನ್ನು ದಿನೇಶ್ ಕಾರ್ತಿಕ್ ಅಷ್ಟರಮಟ್ಟಿಗೆ ನಂಬಿ ಬಿಟ್ಟಿದ್ದರು.

ಆದರೆ ಕೆಂಡವನ್ನು ಎಷ್ಟು ದಿನ ಸೆರಗಿನಲ್ಲಿ ಕಟ್ಟಿಕೊಳ್ಳಲು ಸಾಧ್ಯ? 2009ರ ವೇಳೆಗೆ ದಿನೇಶ್ ಕಾರ್ತಿಕ್‌ಗೆ ಎಲ್ಲವೂ ತಿಳಿಯಿತು. ಪತ್ನಿ ಹಾಗೂ ಸ್ನೇಹಿತ ಮಾಡಿದ ಮೋಸದಿಂದ ಕಾರ್ತಿಕ್ ಕುಗ್ಗಿ ಹೋದರು. ಮಗನಿಗೆ ಮನಸ್ಸಿಲ್ಲದಿದ್ದರೂ ಸ್ನೇಹಿತನ ಮಗಳನ್ನು ಅವನ ಕುತ್ತಿಗೆಗೆ ಕಟ್ಟಿದ ತಪ್ಪಿಗಾಗಿ ದಿನೇಶ್ ಕಾರ್ತಿಕ್ ಅವರ ತಂದೆಯೂ ಮರುಗುವಂತಾಯಿತು. ಕೊನೆಗೆ ಪತ್ನಿಗೆ ಡೈವೋರ್ಸ್ ನೀಡಿದರು ದಿನೇಶ್ ಕಾರ್ತಿಕ್. ದಿನೇಶ್ ಕಾರ್ತಿಕ್ ಅವರಿಂದ ದೂರವಾದ ನಿಖಿತಾ, ಮುರಳಿ ವಿಜಯ್ ಅವರನ್ನು ಮದುವೆಯಾದರು.

ದಿನೇಶ್ ಬಾಳು ಬೆಳಗಿದ ಪಳ್ಳಿಕಲ್
ಇತ್ತ ಮಾನಸಿಕವಾಗಿ ಕುಗ್ಗಿ ಹೋಗಿದ್ದ ದಿನೇಶ್ ಕಾರ್ತಿಕ್‌ಗೆ ಆಘಾತದಿಂದ ಹೊರಬರಲು ತಿಂಗಳುಗಳೇ ಬೇಕಾದವು. ನಂತರ ಅವರ ಬಾಳನ್ನು ಬೆಳಗಿನವಳೇ ದೇಶದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.

PC: Twitter/Dipika Pallikal
PC: Twitter/Dinesh Karthik

ಚೆನ್ನೈ ನಿವಾಸಿಯಾದ ಪಳ್ಳಿಕಲ್ ಅವರನ್ನು 2015ರಲ್ಲಿ ಮದುವೆಯಾದ ನಂತರ ದಿನೇಶ್ ಕಾರ್ತಿಕ್ ಹೊಸ ಮನುಷ್ಯನಾಗಿ ಬದಲಾದರು. ಅವರಿಗೆ ಮತ್ತೆ ಟೀಮ್ ಇಂಡಿಯಾದ ಬಾಗಿಲು ತೆರೆಯಿತು. ಈಗ ದಿನೇಶ್ ಕಾರ್ತಿಕ್, ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

Related Articles