ಜೈಸಿಮ್, ಆನಂದ್‌ಗೆ ಪ್ರಶಸ್ತಿ

0
312
ಬೆಂಗಳೂರು:ರಾಜ್ಯ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಎಂ. ಚೆನ್ನಿಯಪ್ಪನ್ ಸ್ಮಾರಕ ಅಂತರ್ ಕ್ಲಬ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಕೆಎಸ್‌ಬಿಎ ತಂಡದ ಜೈಸಿಮ್ ತಾವಿನ್ ಹಾಗೂ ಎಚ್.ಇ. ಆನಂದ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.  ಫೈನಲ್ ಪಂದ್ಯದಲ್ಲಿ ಕೆಎಸ್‌ಬಿಎ ಡಿ ತಂಡದ ಡಿ.ರಾಜಾ ಅವರನ್ನು ಜೈಸಿಮ್ ತಾವಿನ್ ೨-೦ ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ದಿನದ ಎರಡನೇ ಪಂದ್ಯದಲ್ಲಿ ಆನಂದ್ ೨-೦ ಅಂತರದಲ್ಲಿ ಮೋಹನ್ ಕುಮಾರ್‌ಗೆ ಸೋಲುಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸೆಮಿಫೈನಲ್ ಪಂದ್ಯದಲ್ಲಿ ಕೆಎಸ್‌ಬಿಎ ಬಿ ತಂಡ ೨-೦ ಅಂತರದಲ್ಲಿ ಕೆಎಸ್‌ಬಿಎ ಎ ತಂಡದ ವಿರುದ್ಧ ೨-೦ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಬಿ. ಭಾಸ್ಕರ್ ೨-೦ ಅಂತರದಲ್ಲಿ ಕೆ. ಎಸ್. ನವೀನ್ ಅವರಿಗೆ ಸೋಲುಣಿಸಿದರೆ,  ಜೈಸಿಮ್ ೨-೦ ಅಂತರದಲ್ಲಿ ಸುಪ್ರೀತ್ ವೈಜಿ ಅವರನ್ನು ಪರಾಭ  ವಗೊಳಿಸಿದರು. ಕೆಎಸ್‌ಬಿಎ ಡಿ ತಂಡ ಇಂಡಿಯನ್ ಜಿಮ್ಖಾನಾ ವಿರುದ್ಧ  ೨-೧ ಅಂಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು. ಸತೀಶ್ ಕುಮಾರ್ ೨-೦ ಅಂತರದಲ್ಲಿ ತಿಲಕ್‌ಗೆ ಸೋಲುಣಿಸಿದರೆ, ಮೋಹನ್ ಕುಮಾರ್ ೦-೨ ಅಂತರದಲ್ಲಿ ವಿದ್ಯಾ ಪಿಳ್ಳೆ‘ ವಿರುದ್ಧ ಸೋಲನುಭವಿಸಿದರು. ಅತ್ಯಂತ ರೋಚಕವಾಗಿ ನಡೆದ ನಿರ್ಣಾಯಕ ಪಂದ್ಯದಲ್ಲಿ  ಡಿ. ರಾಜ್ ಕುಮಾರ್ ೨-೧ ಅಂತರದಲ್ಲಿ ಸೇನ್ ಡೆವಿಸ್ ವಿರುದ್ಧ ಜಯ ಗಳಿಸಿದರು