ಇಂಡಿಯನ್ ಸೂಪರ್ ಲೀಗ್‌: ಸೆಮಿಫೈನಲ್ ತಲುಪಿದ ಎಫ್‌ಸಿ ಗೋವಾ

0
334
PC: ISL
ಜೆಮ್ಷೆಡ್ಪುರ: ಫೆರಾನ್ ಕೊರೊಮಿನಾಸ್ (29 ಹಾಗೂ 51ನೇ ನಿಮಿಷ) ಹಾಗೂ ಮ್ಯಾನ್ವೆಲ್ ಲಾನ್ಜರೋಟ್ (69ನೇ ನಿಮಿಷ) ಗಳಿಸಿದ ಅಮೂಲ್ಯ ಗೋಲುಗಳ ನೆರವಿನಿಂದ ಆತಿಥೇಯ ಜೆಮ್ಷೆಡ್ಪುರ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಸೋಲಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
PC: ISL
ಭಾನುವಾರದ ಮೊದಲ ಪಂದ್ಯದಲ್ಲಿ ಜಯ ಗಳಿಸುವ ತಂಡಕ್ಕೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವಿದ್ದಿತ್ತು. ಗೊಂದಲಾದ ಗೂಡಾಗಿದ್ದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಗೋವಾ ತಂಡ ಫೆರಾನ್ ಕೊರೊಮಿನಾಸ್ ಅವರ ಅದ್ಭುತ ಗೋಲುಗಳ ನೆರವಿನಿಂದ ಪ್ರಥಮಾರ್ಧದಲ್ಲಿ  1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ದ್ವಿತಿಯಾರ್ಧದಲ್ಲೂ ಮಿಂಚಿನ ಕೊರೊಮಿನಾಸ್ ಒಟ್ಟು ಗೋಲುಗಳ ಸಂಖ್ಯೆಯನ್ನು 18ಕ್ಕೆ ಕೊಂಡೊಯ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಗೋಲುಗಳು ಕೊರೊಮಿನಾಸ್ ಅವರ ಹೆಸರಿನಲ್ಲಿ ದಾಖಲಾಯಿತು. ಈ ಪಂದ್ಯ ಸಾಕಷ್ಟು ವಿವಾದಗಳಿಗೆ ಸಾಕ್ಷಿಯಾಯಿತು. ಎರಡು ತಂಡಗಳ ಆಟಗಾರರು ಎರಡು ಬಾರಿ ಕೈಮೇಲಾಯಿಸಿದರು. ಎರಡೂ ತಂಡಗಳ ಗೋಲ್‌ಕೀಪರ್ ಗಳು ರೆಡ್ ಕಾರ್ಡ್‌ಗೆ ಗುರಿಯಾದದು ಇದೇ ಮೊದಲು.
30 ಅಂಕಗಳನ್ನು ಗಳಿಸಿದ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ  ಮೂರನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.  ಅಂತಿಮ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಆತ್ಮವಿಶ್ವಾಸದ ನಡೆಯಲ್ಲಿ ಬಂದ ಜೆಮ್ಷೆಡ್ಪುರ ತಂಡ ಕೊನೆಯ ಪಂದ್ಯದಲ್ಲಿ ಪರಾಭವಗೊಳ್ಳುವುದರೊಂದಿಗೆ ಕೇವಲ 26 ಅಂಕ ಗಳಿಸಿ ಐದನೇ ಸ್ಥಾನದೊಂದಿಗೆ ನಿರ್ಗಮಿಸಿತು.